ವೈಕುಂಠ ಏಕಾದಶಿ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜೆ…!

Promotion

ಮೈಸೂರು,ಡಿಸೆಂಬರ್,25,2020(www.justkannada.in) : ವೈಕುಂಠ ಏಕಾದಶಿ ಹಿನ್ನೆಲೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜೆ.Teachers,solve,problems,Government,bound,Minister,R.Ashok

ಆಶ್ರಮದ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಏಕಾದಶಿ ಹಿನ್ನೆಲೆ ವೆಂಕಟೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆ ಪೂಜೆಯಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಾಗಿಯಾಗಿದ್ದರು.

ದೇವಾಲಯದ ಉತ್ತರ ಧ್ವಾರದಲ್ಲಿ ಸ್ವರ್ಗದ ಭಾಗಿಲು ಸ್ಥಾಪನೆ ಮಾಡಲಾಗಿದ್ದು, ಕೊರೊನಾ ಹಿನ್ನೆಲೆ ಭಕ್ತರಿಗೆ ಗೈಡ್‌ಲೈನ್. ಮಾಸ್ಕ್ ಕಡ್ಡಾಯ, ಅಂತರದಲ್ಲಿ ಬಂದು ದೇವರ ದರ್ಶನಕ್ಕೆ ಅವಕಾಶ. ದತ್ತವೆಂಕಟೇಶ್ವರ ದೇವಾಲಯದಲ್ಲಿ  ಶೇಷವಾಹನ ಅಲಂಕಾರ. ವೆಂಕಟೇಶ್ವರನಿಗೆ ವಿಷ್ಣುವಿನ ಅವತಾರದ ಅಲಂಕಾರ ಮಾಡಲಾಗಿದೆ.

ಮೈಸೂರು ಊಟಿ ರಸ್ತೆಯಲ್ಲಿರುವ ದತ್ತವೆಂಕಟೇಶ್ವರ ದೇವಾಲಯ ಆವರಣದಲ್ಲಿ ಸರಳವಾಗಿ ಚಪ್ಪರದಿಂದ ವೈಕುಂಠದ್ವಾರ ನಿರ್ಮಾಣ. ಸರತಿ ಸಾಲಿನಲ್ಲಿ ಆಗಮಿಸಿ ಭಕ್ತರಿಂದ ವೆಂಕಟೇಶ್ವರನ ದರ್ಶನ. ಯಾವುದೇ ಪ್ರಸಾದ ವಿತರಣೆ ಇಲ್ಲ ಎಂದು ತಿಳಿದು ಬಂದಿದೆ.

key words : Vaikuntha-Ekadashi-Ganapathi-Special-worship-Sachidananda-Ashram …!