ಖರಾಬು ಜಾಗವೆಂದು ರಸ್ತೆಗೆ ಬಿಟ್ಟುಕೊಡುವಂತೆ ಆಗ್ರಹ : ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ….

ಮೈಸೂರು,ಮಾ,12,2020(www.justkannada.in): ಮೈಸೂರಿನ ಗುಂಡೂರಾವ್ ನಗರದಲ್ಲಿನ ರೆವಿನ್ಯೂ ಜಾಗವನ್ನು ಖರಾಬು ಜಾಗವಲ್ಲ ಎಂದು ನ್ಯಾಯಾಲಯ ತಿಳಿಸಿದ ಹಿನ್ನೆಲೆಯಲ್ಲಿ   ಪಾಲಿಕೆ ಅಧಿಕಾರಿಗಳು  ಇಂದು ಬೆಳ್ಳಂಬೆಳಿಗ್ಗೆ ಕಾಂಪೌಂಡ್ ಹಾಕಿಸುತ್ತಿರುವ ವೇಳೆ ಸ್ಥಳೀಯರು ಮತ್ತು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳೀಯರು ಇದು ಖರಾಜು ಜಾಗವೆಂದು ರಸ್ತೆಗೆ ಬಿಟ್ಟುಕೊಡಿ, ಹೆಂಗಸರು, ಮಕ್ಕಳಿಗೆ ಬಳಸಿ ಬರಲು ತುಂಬಾ ದೂರವಾಗಲಿದೆ. ಇಲ್ಲಿ ಯಾಕೆ ಕಂಪೌಂಡ್ ಹಾಕುತ್ತಿದ್ದೀರೆಂದು ತರಾಟೆಗೆ ತೆಗೆದುಕೊಂಡರು. ಆದರೆ ಅಧಿಕಾರಿಗಳು ನ್ಯಾಯಾಲಯವೇ ಅದು ಖರಾಬು ಜಾಗ ಅಲ್ಲವೆಂದು ತಿಳಿಸಿದೆ ಎಂದು ಎಷ್ಟು ತಿಳಿ ಹೇಳಿದರೂ ಕೇಳದೇ ಇದ್ದರಿಂದ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.urge-road-treasury-between-mysore-city-corporation-officer-locals

ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಮಹಾನಗರ ಪಾಲಿಕೆಯ ಅಧಿಕಾರಿ ಭರತ್ ನೇತೃತ್ವದಲ್ಲಿ ಕಂಪೌಂಡ್ ನಿರ್ಮಾಣ ಕಾಮಗಾರಿ ನಡೆದಿತ್ತು. ಕಂಪೌಂಡ್ ನಿರ್ಮಾಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Key words: urge -road – treasury-between –mysore city corporation-officer – locals.