2021ನೇ ಸಾಲಿನ ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣ.

Promotion

ನವದೆಹಲಿ,ಮೇ,30,2022(www.justkannada.in): 2021ನೇ ಸಾಲಿನ ಯುಪಿಎಸ್ ಸಿ ಫಲಿತಾಂಶ ಪ್ರಕಟವಾಗಿದ್ದು ಶ್ರುತಿ ಶರ್ಮಾ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಹಾಗೆಯೇ ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿಯ ಫಲಿತಾಂಶದಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಹೆಣ್ಣುಮಕ್ಕಳೇ ಪಡೆದುಕೊಂಡಿದ್ದಾರೆ. ಶ್ರುತಿ ಶರ್ಮಾ ಮೊದಲ ಸ್ಥಾನ, ಅಂಕಿತಾ ಅಗರ್ವಾಲ್ 2ನೇ ಸ್ಥಾನ, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನವನ್ನ ಪಡೆದಿದ್ದಾರೆ.

ಕರ್ನಾಟಕದಿಂದ  ಅವಿನಾಶ್​.ವಿ 31ನೇ ರ್ಯಾಂಕ್ ಪಡೆದಿದ್ದು ಕರ್ನಾಟಕಕ್ಕೆ ಮೊದಲ ಸ್ಥಾನದಲ್ಲಿ ಇದ್ದಾರೆ.   ಬೆನಕ ಪ್ರಸಾದ್​ 92ನೇ ರ್ಯಾಂಕ್,  ಮೆಲ್ವನ್​​ 118ನೇ ರ್ಯಾಂಕ್ ನಿಖಿಲ್​ ಬಸವರಾಜ್ ಪಾಟೀಲ್​ 139ನೇ ರ್ಯಾಂಕ್ ಪಡೆದಿದ್ದಾರೆ. ಅಭ್ಯರ್ಥಿಗಳು ತಮ್ಮ UPSC ನಾಗರಿಕ ಸೇವಾ ಫಲಿತಾಂಶಗಳನ್ನು upsc.gov.in ನಲ್ಲಿ ಪರಿಶೀಲಿಸಬಹುದು.

Key words: UPSC- Result -Announcement – 2021

ENGLISH SUMMARY…

24 from Karnataka succeed in 2021 UPSC exams
New Delhi, May 30, 2022 (www.justkannada.in): The 2021 UPSC results has been announced. Shruti Sharma has emerged as the topper in the country. From Karnataka 24 candidates have achieved success.
Women have secured the first four top ranks in this year’s UPSC exams. Shruti Sharma (1st rank), Ankita Agarwal (2nd rank), Gamini Singla (3rd rank).
The results are available in the website upsc.gov.in. Avinash V. from Davanagere has secured 31st rank. Other candidates from Karnataka who have achieved success are Benaka Prasad, 92nd rank, Melwin 118th rank and Nikhil Basavaraj Patil, 139 rank.
Keywords: UPSC exam results/ 2021/ Shruti Sharma/ 1st rank