ರೈತಮುಖಂಡ ರಾಕೇಶ್ ಟಿಕಾಯತ್ ಗೆ ಕಪ್ಪು ಮಸಿ ಎರಚಿ, ಹಲ್ಲೆಗೆ ಯತ್ನ…

ಬೆಂಗಳೂರು,ಮೇ,30,2022(www.justkannada.in): ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಬೆಂಗಳೂರಿನಲ್ಲಿ ಕಿಡಿಗೇಡಿಗಳು ಕಪ್ಪು ಮಸಿ ಎರಚಿ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ರೈತ ಚಳವಳಿ ಬಗ್ಗೆ ಆತ್ಮಾವಲೋಕನದ ಸ್ಪಷ್ಟೀಕರಣ ಸಭೆಯಲ್ಲಿ ಈ ಘಟನೆ ನಡೆದಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರೈತನಾಯಕ  ರಾಕೇಶ್ ಟಿಕಾಯತ್, ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ರಾಜ್ಯದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕೆಲ ಕಿಡಿಗೇಡಿಗಳು ವಾಗ್ವಾದ ನಡೆಸಿ  ರಾಕೇಶ್ ಟಿಕಾಯತ್  ಮತ್ತು ಯಧುವೀರ್ ಸಿಂಗ್  ಮೇಲೆ ಕಪ್ಪು ಮಸಿ ಎರಚಿ  ಹಲ್ಲೆ ಮಾಡಲು ಯತ್ನಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಕೇಳಿ ಬರುತ್ತಿರುವ ಆರೋಪ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಲು ರಾಷ್ಟ್ರೀಯ ನಾಯಕರು ಬಂದಿದ್ದರು. ಮಸಿ ಎರಚಿ ಹಲ್ಲೆಗೆ ಮುಂದಾಗಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ, ವಿಚಾರಣೆ ಬಳಿಕ ಮಾಹಿತಿ ತಿಳಿದುಬರಲಿದೆ.

Key words: Farmer leader-Rukesh Tikayat- attempts -black ink

ENGLISH SUMMARY….

Attack on farmer leader Rakesh Tikait in Bengaluru
Bengaluru, May 30, 2022 (www.justkannada.in): In an incident, miscreants painted farmer leader Rakesh Tikait’s face black and tried to attack him in Bengaluru.
The incident took place during the self-retrospection clarification meeting on the farmers’ movement, held at the Gandhi Bhavana in Bengaluru today. Farmer leader Rakesh Tikait was addressing a press meet. He demanded to arrest Karnataka farmers’ leader Kodihalli Chandrashekar who is facing allegations of involving in corruption over the farmers’ protest.
At this juncture, a few miscreants started arguing with the Tikait and pained Tikait and Yaduveer Singh’s faces black, and attempted to attack them. The national farmer leaders were in Bengaluru to clarify the allegations of corruption charged against farmer leader Kodihalli Chandrashekar. Police have arrested those who defaced the farmer leader.
Keywords: Farmer leader/ Rakesh Tikait/ Yaduveer Singh/ Kodihalli Chandrashekar