ಕೊರೋನಾ ಬಗ್ಗೆ ಅನಗತ್ಯ ಭೀತಿ : ಹಿರಿಯ ಪತ್ರಕರ್ತ, ಅಂಕಣಕಾರ  ನಾಗೇಶ್ ಹೆಗಡೆ…

ಬೆಂಗಳೂರು,ಡಿಸೆಂಬರ್,4,2020(www.justkannada.in): ಕೊರೋನಾ ಬಗ್ಗೆ ಅನಗತ್ಯ ಭೀತಿಯನ್ನು ಸೃಷ್ಟಿಸಲಾಗಿದೆ. ಕೊರೋನಾ ಅತಿ ದೊಡ್ಡ ಖಾಯಿಲೆ ಎನ್ನುವುದು ಶುದ್ಧ ಸುಳ್ಳು ಎಂದು ಹಿರಿಯ ಪತ್ರಕರ್ತ, ಅಂಕಣಕಾರ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು.unnecessary-fears-corona-senior-journalist-columnist-nagesh-hegde-gn-mohan

ʼಅವಧಿʼ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು ಕೊರೋನಾಗಿಂತ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳಬೇಕಾಗಿರುವುದು ಹೃದ್ರೋಗ ಹಾಗೂ ಕ್ಷಯದ ಬಗ್ಗೆ ಎಂದರು.

ಪ್ರತೀ ದಿನ ಭಾರತದಲ್ಲಿ ಹೃದ್ರೋಗಕ್ಕೆ 9500 ಜನ ಬಲಿಯಾಗುತ್ತಿದ್ದಾರೆ. ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಗೆ ಪ್ರತೀ ದಿನ 7 ಸಾವಿರ ಜನ ಪ್ರಾಣ ತೆತ್ತುತ್ತಿದ್ದಾರೆ. ಆದರೆ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಒಂದು ಲಕ್ಷಕ್ಕೆ 8 ಜನ ಮಾತ್ರ. ಹೃದ್ರೋಗ ಹಾಗೂ ಕ್ಷಯದಿಂದ ಸಾವನ್ನಪ್ಪುತ್ತಿರುವವರ ಪೈಕಿ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಅದಾವ ಶಕ್ತಿಗಳು ಕೊರೋನಾ ಬಗ್ಗೆ ಇಷ್ಟು ಉತ್ಸಾಹ ತಾಳಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.

ಹಾಗಂದ ಮಾತ್ರಕ್ಕೆ ಕೊರೋನಾವನ್ನು ಲಘುವಾಗಿ ತೆಗೆದುಕೊಂಡು ಬೇಕಾದಂತೆ ಗುಂಪುಗೂಡಿ, ಅಲಕ್ಷ್ಯ ಮಾಡಿ ಎಂದು ಹೇಳುತ್ತಿಲ್ಲ. ಮುಖವಾಡ ಧರಿಸುವುದು ಮುಖ್ಯ ಎಂದು ಕಿವಿಮಾತು ಹೇಳಿದರು.

ಮಲೆನಾಡಿನ ಕಣಿವೆಯಲ್ಲಿದ್ದ ನಾನು ಕಣಿವೆಯ ಆಳಕ್ಕೂ, ಹಿಮಾಲಯದ ಪರ್ವತದ ಎತ್ತರಕ್ಕೂ, ವಿದೇಶದ ಗಗನಚುಂಬಿ ಕಟ್ಟಡಗಳಿಗೂ ಮುಟ್ಟುವಂತಾಗಿದ್ದು ನನ್ನ ಅದೃಷ್ಟ. ಇದರಿಂದ ನನಗೆ ಆಪಾರ ಸ್ನೇಹಿತ ವರ್ಗ ದಕ್ಕಿದೆ ಎಂದು ನೆನಪು ಮೆಲುಕು ಹಾಕಿದ ಅವರು ಪರಿಸರ ಚಳವಳಿಗಳು ನನ್ನನ್ನು ರೂಪಿಸಿವೆ ಹಾಗೆಯೇ ನಾನು ಬರೆದ ಲೇಖನಗಳ ಸುತ್ತಲೂ ಪರಿಸರ ಚಳವಳಿಗಳು ಹುಟ್ಟಿಕೊಂಡವು ಎಂದರು. unnecessary-fears-corona-senior-journalist-columnist-nagesh-hegde-gn-mohan

ಪತ್ರಕರ್ತನಾದವನು ಪ್ರಜಾಪ್ರಭುತ್ವದ ಪರ ವಾಲಿರಬೇಕು. ಪ್ರಜಾಪ್ರಭುತ್ವದ ಮೌಲ್ಯಗಳ ಪರ ವಾಲುವುದೂ ಸಹಾ ವೃತ್ತಿಪರ ಪತ್ರಿಕೋದ್ಯಮವೇ ಎಂದರು.  ಕಾರ್ಯಕ್ರಮವನ್ನು ‘ಅವಧಿʼಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ನಡೆಸಿಕೊಟ್ಟರು.

Key words: Unnecessary- fears – Corona- Senior journalist – columnist- Nagesh Hegde-GN mohan