ಕ್ಯಾನ್ಸರ್ ತಡೆಗೆ ಪ್ರೊ.ಕೆ.ಎಸ್.ರಂಗಪ್ಪ ಅಂಡ್ ಟೀಮ್ ದಾಪುಗಾಲು : ಐಸೈನ್ಸ್ ನಿಯತಕಾಲೀಕೆ ಪ್ರಕಟವಾಯ್ತು ಸಂಶೋಧನ ಲೇಖನ.

 

ಮೈಸೂರು, ಮೇ08, 2019 : (www.justkannada.in news) ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ‘ Targeting Heparanase in Cancer ‘ ಎಂಬ ಸಂಶೋಧನ ಲೇಖನ iScience ನಿಯತಕಾಲೀಕೆಯಲ್ಲಿ ಪ್ರಕಟಿಸಲಾಗಿದೆ. ಆ ಮೂಲಕ ಮೈಸೂರು ವಿವಿಗೆ ಹೆಮ್ಮೆಗೆ ಗರಿ ಮೂಡಿಸಿದ್ದಾರೆ.

ಐಸೈನ್ಸ್ ನಿಯತಕಾಲೀಕೆ ಅನ್ನು ಸೆಲ್ ಪ್ರೆಸ್ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತದೆ. ಸೆಲ್ ಪ್ರೆಸ್ ಪ್ರಕಾಶನಾಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ವಿಜ್ಞಾನ ಸಂಶೋಧನಾ ಪ್ರಕಾಶನ ಸಂಸ್ಥೆಯಾಗಿದೆ. ಕರ್ನಾಟಕದ ವಿಶ್ವವಿದ್ಯಾನಿಲಯಗಳಿಂದ (ಪ್ರಾಯಶಃ ಭಾರತೀಯ ವಿಶ್ವವಿದ್ಯಾನಿಲಯಗಳಿಂದಲೂ) ಐಸೈನ್ಸ್ ನಿಯತಕಾಲೀಕೆಯಲ್ಲಿ ಪ್ರಕಟಿಸಿದ ಹೆಮ್ಮೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲುತ್ತದೆ.
ಪ್ರೊಫೆಸರ್ ಕೆ. ಎಸ್. ರಂಗಪ್ಪ ರವರಿಗೇ ಸಂಶೋಧನಾ ಕಾರ್ಯವನ್ನು ಸಲ್ಲಿಸಲು ಐಸೈನ್ಸ್ ನಿಂದ ಆಮಂತ್ರಣವನ್ನು ಪಡೆದಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ವಿಶ್ವದ ಮೂರು ಉನ್ನತ ಕ್ಯಾನ್ಸರ್ ಜೀವಶಾಸ್ತ್ರಜ್ಞರು ಸಂಶೋಧನ ಲೇಖನವನ್ನು ಮೌಲ್ಯಮಾಪನ ಮಾಡಿ ಮತ್ತು ಅದರ ಪ್ರಕಟಣೆಗಾಗಿ ಶಿಫಾರಸು ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಪ್ರೊಫೆಸರ್ ಕೆ. ಎಸ್. ರಂಗಪ್ಪ ಮತ್ತು ಇಸ್ರೇಲ್ನ ಪ್ರೊಫೆಸರ್ ಇಸ್ರೇಲ್ ವ್ಲೋಡಾವ್ಸ್ಕಿ (Prof Israel Vlodavsky) ನಡುವಿನ ಅಂತರರಾಷ್ಟ್ರೀಯ ಸಹಭಾಗಿತ್ವದ ಫಲಿತಾಂಶವಾಗಿದೆ.

ಮೂರು ವರ್ಷಗಳ ಅವಧಿಗೆ 2016 ರಲ್ಲಿ ಅಂತರರಾಷ್ಟ್ರೀಯ ಸಹಯೋಗದ ಸಂಶೋಧನಾ ಯೋಜನೆಯನ್ನು ಪ್ರಾರಂಭಿಸಲಾಯಿತು. ಪ್ರೊಫೆಸರ್ ರಂಗಪ್ಪ ಅವರು ಮೈಸೂರು ವಿಶ್ವವಿದ್ಯಾಲಯದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಡಾ. ಮೋಹನ್ ಸಿ. ಡಿ., ಡಾ. ಶೋಭಿತ್ ಆರ್., ಡಾ. ಚಂದ್ರ ನಾಯಕ್ ಮತ್ತು ಡಾ ಬಸಪ್ಪ ಅವರು ಮೈಸೂರು ಸಂಶೋಧನಾ ತಂಡದಲ್ಲಿದ್ದಾರೆ. ಇಸ್ರೇಲ್ ತಂಡವು ಪ್ರೊಫೆಸರ್ ಇಸ್ರೇಲ್ ವೊಲ್ಡಾವ್ಸ್ಕಿ ನೇತೃತ್ವದಲ್ಲಿದೆ.

ಈ ಸಂಶೋಧನ ಲೇಖನವು ಮೈಸೂರು ವಿಶ್ವವಿದ್ಯಾಲಯದ ಗೌರವ ಮತ್ತು ಸಂಸ್ಥೆಯ ರುಜುವಾತುಗಳನ್ನು ಎತ್ತರಿಸುತ್ತದೆ. ಹೆಪರೇನೇಸ್ ಎನ್ನುವುದು ಕಿಣ್ವವಾಗಿದ್ದು, ಇದು ಮಾನವನ ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ವಿವಿಧ ಅಂಗಗಳಿಗೆ ಪ್ರಸರಣ ಮಾಡುತ್ತದೆ. ಈ ಸಂಶೋಧನ ಲೇಖನವು ಕ್ಯಾನ್ಸರ್ ಪ್ರಸರಣದಲ್ಲಿ ಹೆಪಾರನೇಸ್ ಕಿಣ್ವದ ಪಾತ್ರವನ್ನು ಸಮಗ್ರವಾಗಿ ಚರ್ಚಿಸುತ್ತದೆ ಮತ್ತು ಪ್ರಪಂಚದ ಸಂಶೋಧಕರಿಗೆ ಕ್ಯಾನ್ಸರ್ ವಿರುದ್ಧ ಹೆಪಾರಾನೇಸ್ ಅನ್ನು ಗುರಿಯಾಗಿಟ್ಟುಕೊಂಡು ಹೊಸ ಔಷಧಿಗಳನ್ನು ವಿನ್ಯಾಸಗೊಳಿಸಲು ಒಳನೋಟವನ್ನು ಒದಗಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಪ್ರೊಫೆಸರ್ ರಂಗಪ್ಪ ಅವರು ಅನೇಕ ಔಷಧೀಯ ಗುಣಲಕ್ಷಣಗಳನ್ನು ಹೊಂದಿರುವ ರಾಸಾಯನಿಕಗಳು ಕಂಡುಹಿಡಿದು, ವಿವಿಧ ಕ್ಯಾನ್ಸರ್ಗಳ ವಿರುದ್ಧವಾಗಿ ಪರೀಕ್ಷಿಸಲಾಗಿದೆ. ಪ್ರೊಫೆಸರ್ ರಂಗಪ್ಪ ಅವರು ಈ ಔಷಧೀಯ ರಾಸಾಯನಿಕಗಳ ಅಭಿವೃದ್ಧಿಗೆ 11 ಪೇಟೆಂಟ್ಗಳನ್ನು ಹೊಂದಿದ್ದಾರೆ ಮತ್ತು ಅವರು 450 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಪ್ರೊ. ರಂಗಪ್ಪ ಅವರ ಹಲವಾರು ರಾಸಾಯನಿಕಗಳು ವಿಭಿನ್ನ ರೀತಿಯ ಕ್ಯಾನ್ಸರ್ ಗಳ ವಿರುದ್ಧ ಮಾನವ ಪ್ರಾಯೋಗಿಕ
ಹಂತದಲ್ಲಿವೆ.

ವಿಶ್ವದ ಖ್ಯಾತ ಸಂಶೋಧನಾ ಸಂಸ್ಥೆಗಳಿಂದ ಪ್ರೊಫೆಸರ್ ರಂಗಪ್ಪ ಅವರಿಗೆ ಆಹ್ವಾನ:

ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಮತ್ತು ಐಸೈನ್ಸ್ ನಿಯತಕಾಲೀಕೆಯಲ್ಲಿ ಸಂಶೋಧನ ಲೇಖನಗಳನ್ನು ಪ್ರಕಟಿಸಿದ ನಂತರ, ಫಿನ್ಲ್ಯಾಂಡ್, ಚೀನಾ ಮತ್ತು ಫಿಲಿಪೈನ್ಸ್ನ ಪ್ರಮುಖ ವಿಜ್ಞಾನಿಗಳು, ಪ್ರೊಫೆಸರ್ ರಂಗಪ್ಪ ಅವರನ್ನು ಔಷಧೀಯ ರಾಸಾಯನಿಕಗಳ ಅಭಿವೃದ್ಧಿಗಳ ಬಗ್ಗೆ ಚರ್ಚಿಸಲು ಮತ್ತು ಅಂತರರಾಷ್ಟ್ರೀಯ ದ್ವಿಪಕ್ಷೀಯ ಸಹಭಾಗಿತ್ವವನ್ನು ಹೆಚ್ಚಿಸಲು ಆಹ್ವಾನಿಸಿದ್ದಾರೆ.

ENGLISH SUMMARY : 

University of Mysore researchers published paper in Cell Press: iScience

Scientists from the University of Mysore have published an article entitled “Targeting heparanase in cancer: Inhibition by Synthetic, Chemically Modified and Natural Compounds” has been published in the journal iScience. The iScience journal is published by Cell Press, which is an internationally highly renowned and reputed science research publisher. This is the first paper to be published in Cell Press: iScience from the Universities of Karnataka. It is the result of international collaboration between Professor K S Rangappa from University of Mysore and Professor Israel Vlodavsky from Vascular Biology Research Center, Israel. The collaborative research project was initiated in 2016 for the period of three years and funded by University Grants Commission to Professor Rangappa and Israel Science Foundation to the Israeli counterpart.
The University of Mysore team is headed by Professor K S Rangappa and the members are Dr Mohan CD, Dr Shobith R (Adichunchanagiri Institute for Molecular Medicine), Dr Chandra Nayak and Dr Basappa. The Israel team is led by Professor Israel Vlodavsky. Heparanase is an enzyme that provides signal to cancer cell for proliferation and responsible for the spreading of cancer to various organs of the human body. This paper comprehensively discusses the role of heparanase enzyme in initiation and spreading of cancer to the different organs and provides an insight and new ideas to the researchers to design new drugs against cancer using heparanase as the target. Many synthetic drug molecules are synthesized from Professor Rangappa’s laboratory and tested against various cancers in past two decades. Prof. Rangappa has 11 patents for the development of anticancer agents and 450 research papers related to medicinally important compounds.

Several patented molecules of Prof. Rangappa are in clinical trials against different types of cancers.

Professor Rangappa Gets Invitation from Premier Institutions of the World

Following the success of publishing in Proceedings of the National Academy of Sciences, USA and iScience (Cell Press), Professor Rangappa has been invited by the leading researchers of Finland, China and, Philippines to discuss about cancer drug discovery and to have international bilateral collaboration between the respective premier institutions.