ಅಂಡರ್ 19 ವಿಶ್ವಕಪ್ ಕ್ರಿಕೆಟ್: ಬಾಂಗ್ಲಾ ಆಟಗಾರರ ವರ್ತನೆಗೆ ಅಭಿಮಾನಿಗಳ ಬೇಸರ

Promotion

ಬೆಂಗಳೂರು , ಫೆಬ್ರವರಿ 10, 2020 (www.justkannada.in): ಅಂಡರ್ 19 ವಿಶ್ವಕಪ್‌ ಗೆದ್ದ ವೇಳೆ ಬಾಂಗ್ಲಾ ತಂಡ ಹಾಗೂ ಭಾರತದ ಯುವ ಆಟಗಾರರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.

ಬಾಂಗ್ಲಾ ಆಟಗಾರರ ವರ್ತನೆಗೆ ಎಲ್ಲರಿಂದ ಬೇಸರ, ಅಸಮಾಧಾನ ವ್ಯಕ್ತವಾಗಿದೆ.

ಬಾಂಗ್ಲಾ ಯುವ ಆಟಗಾರರು ಭಾರತವನ್ನು ಫೈನಲ್ ನಲ್ಲಿ ಸೋಲಿಸಿದ ನಂತರ ಬಾಂಗ್ಲಾ ಆಟಗಾರನೊಬ್ಬ ಭಾರತೀಯ ಆಟಗಾರನ ಕುರಿತು ಆಡಿದ ಮಾತು ಅಲ್ಲಿದ್ದ ಇತರೆ ಭಾರತೀಯ ಆಟಗಾರರನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದಾಗಿ ಆಟಗಾರರ ನಡುವೆ ಮಾತಿನ ಚಕಮಕಿ ಆರಂಭವಾಗಿತ್ತು. ಈ ಘಟನೆ ವಿಶ್ವ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಭಾರತ ತಂಡದ ನಾಯಕ ಪ್ರಿಯಂಗರ್ಗ್ ಮಧ್ಯಪ್ರವೇಶಿಸಿದಾಗಲೂ ಬಾಂಗ್ಲಾ ಆಟಗಾರರು ತಮ್ಮ ದರ್ಪ ತೋರಿದರು. ಆಗ ಎರಡೂ ಆಟಗಾರರ ನಡುವೆ ಘರ್ಷಣೆ ನಡೆಯುವ ಹಂತಕ್ಕೆ ತಲುಪಿದೆ.

ಕ್ರಿಕೆಟ್ ಚಿತ್ರೀಕರಣ ನಡೆಸುತ್ತಿದ್ದ ಕ್ಯಾಮರಾಗಳು ಪ್ರೇಕ್ಷಕರ ಗ್ಯಾಲರಿಯತ್ತ ತಮ್ಮ ಗಮನ ಹರಿಸಿದ್ದರಿಂದ ಅಲ್ಲಿ ಏನಾಯಿತು ಎಂದು ತಂಡದ ಆಟಗಾರರನ್ನು ಹೊರತುಪಡಿಸಿ ಬೇರಾರಿಗೂ ತಿಳಿಯದಾಯಿತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.