ಏ.13 ರಂದು ಯುಗಾದಿ ಹಬ್ಬ ಹಿನ್ನೆಲೆ: ಮೂರು ದಿನಗಳ ಕಾಲ ಮೈಸೂರಿನ ದೇವರಾಜ ಮಾರುಕಟ್ಟೆ ಸ್ಥಳಾಂತರ…

kannada t-shirts

ಮೈಸೂರು,ಏಪ್ರಿಲ್,8,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ಹೆಚ್ಚುತ್ತಿದ್ದು ಏಪ್ರಿಲ್ 13 ರಂದು ಯುಗಾದಿ ಹಬ್ಬ ಇರುವ ಹಿನ್ನೆಲೆ,  ಹೆಚ್ಚು ಜನಸಂದಣಿ ಸೇರದಂತೆ ತಡೆಯಲು ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆಯನ್ನ ಸ್ಥಳಾಂತರ ಮಾಡಲಾಗಿದೆ.

ಈ ಕುರಿತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ಯುಗಾದಿ ಹಬ್ಬದಕ್ಕಾಗಿ ಜನರು ಹೂ, ಹಣ್ಣು, ತರಕಾರಿ ಮುಂತಾದ ಅಗತ್ಯ ವಸ್ತುಗಳನ್ನ ಖರೀದಿಸಲು ಮಾರುಕಟ್ಟೆ ಜನಸಾಗರ ಲಗ್ಗೆ ಇಡುತ್ತದೆ. ಈ ನಡುವೆ ಮೈಸೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಗಿದ್ದು,  ಮಾರುಕಟ್ಟೆಗೆ ಜನಸಂದಣಿ ಬರದಂತೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.Ugadi Festival - Mysore - Devaraja Market – Displacement-three days

ಏಪ್ರಿಲ್ 11 ರಿಂದ 13ರವರೆಗೆ ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆ ಸ್ಥಳಾಂತರಗೊಳಿಸಿ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ರೈಲ್ವೆ ನಿಲ್ದಾಣದ ಬಳಿಯ ಜೆ.ಕೆ.ಗ್ರೌಂಡ್ ಗೆ ಮಾರುಕಟ್ಟೆ ಸ್ಥಳಾಂತರ ಮಾಡಲಾಗಿದ್ದು , ಮಾರುಕಟ್ಟೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

Key words: Ugadi Festival – Mysore – Devaraja Market – Displacement-three days

website developers in mysore