ಎಲ್ಲೆಡೆ ಯುಗಾದಿ ಸಂಭ್ರಮ: ಟ್ವಿಟ್ವರ್’ನಲ್ಲಿ ಶುಭಾಶಯ ಕೋರಿದ ಪ್ರಧಾನಿ ಮೋದಿ

Promotion

ಬೆಂಗಳೂರು, ಮಾರ್ಚ್ 22, 2023 (www.justkannada.in): ಇಂದು ರಾಜ್ಯದೆಲ್ಲೆಡೆ ಸಂಭ್ರಮದಿಂದ ಯುಗಾದಿ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿ ಹಬ್ಬಕ್ಕೆ ಕರ್ನಾಟಕ ಜನರಿಗೆ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ.

ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಹಾಗೇ, ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯಗಳು ಎಂದಿದ್ದಾರೆ. ಕಲಶ-ಬಾಳೆಲೆಯ ಫೋಟೋ ಇರುವ ಫೋಟೋದ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ನರೇಂದ್ರ ಮೋದಿಯವರ ಸಹಿ ಇದೆ.

ಒಟ್ಟಾರೆ ದೇಶದ ಜನರಿಗೆ ಇಂಗ್ಲಿಷ್​ನಲ್ಲಿ ಯುಗಾದಿ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ತೆಲುಗು ಭಾಷಿಕರಿಗಾಗಿ ಅದೇ ಭಾಷೆಯಲ್ಲಿ ಯುಗಾದಿ ಹಬ್ಬದ ವಿಶ್​ ಮಾಡಿದ್ದಾರೆ. ಹಾಗೇ, ಕಾಶ್ಮೀರಿಗಳ ಹೊಸ ಹಬ್ಬ ನವ್ರೇಹ್​​ಗಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿ ವಿಶ್​ ಮಾಡಿದ್ದಾರೆ. ಇದೇ ದಿನ ಮರಾಠಿಗರು ಗುಡಿ ಪಾಡ್ವಾ ಆಚರಣೆ ಮಾಡುತ್ತಾರೆ. ಅದಕ್ಕೂ ಸಹ ಮೋದಿಯವರು ಶುಭ ಕೋರಿದ್ದಾರೆ.