ಮೈಸೂರಿನಲ್ಲಿ  ಟೈರ್ ಸಿಡಿದು ಲಾರಿ ಪಲ್ಟಿ…

Promotion

ಮೈಸೂರು,ಮೇ,20,2019(www.justkannada.in):  ಮೈಸೂರಿನಲ್ಲಿ ಟೈರ್ ಸಿಡಿದು ಲಾರಿ ಪಲ್ಟಿಯಾಗಿರುವ ಘಟನೆ ಇಂದು ನಡೆದಿದೆ.

ಹಿನಕಲ್ ರಿಂಗ್ ರಸ್ತೆ ಬಳಿ ಈ ಘಟನೆ ನಡೆದಿದೆ. ಮೈಸೂರಿನಿಂದ ನಂಜನಗೂಡಿನ ಫ್ಯಾಕ್ಟರಿಯೊಂದಕ್ಕೆ  ಲಾರಿಯಲ್ಲಿ ಕಾಟನ್ ಬಾಕ್ಸ್ ಗಳನ್ನ ಸಾಗಿಸಲಾಗುತ್ತಿತ್ತು. ಈ ವೇಳೆ ಹಿನಕಲ್ ರಿಂಗ್ ರೋಡ್ ಬಳಿ ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ  ಡಿವೈಡರ್ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ಸದ್ಯ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ವಿ.ವಿ.ಪುರಂ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Tyre blast and lorry palty in mysore

#mysore #lorry #accident