ರಾಣಾ ಸ್ಥಾನಕ್ಕೆ ಎರಡು ಮುಧೋಳ್ ನಾಯಿ : ಬಂಡೀಪುರ ಸಫಾರಿ ಕೇಂದ್ರದ ಬಳಿ ಪಾಲನೆ

Promotion

ಚಾಮರಾಜನಗರ,ಅಕ್ಟೋಬರ್,22,2020(www.justkannada.in) :  ಬಂಡೀಪುರದಲ್ಲಿ ಬೇಟೆಗಾರರ ಪತ್ತೆ ಹಾಗೂ ಹುಲಿ ಕಾರ್ಯಾಚರಣೆಯಲ್ಲಿ ಕಿಂಗ್ ಆಗಿದ್ದ ರಾಣಾ ನಿವೃತ್ತಿ ಅಂಚಿಗೆ ಬಂದಿರುವುದರಿಂದ ಆತನ ಸ್ಥಾನ ತುಂಬಲು ಎರಡು ಮುಧೋಳ್ ನಾಯಿ ಮರಿಗಳನ್ನು ಕರೆತರಲಾಗಿದೆ.jk-logo-justkannada-logo

ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀಪದ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದಿಂದ 1 ತಿಂಗಳಿನ 1 ಗಂಡು, 1 ಹೆಣ್ಣು ಮರಿಯನ್ನು 27 ಸಾವಿರ ರೂ.ಗೆ ಬಂಡೀಪುರ ಅರಣ್ಯ ಇಲಾಖೆ ಖರಿದೀಸಿದೆ.Two,mudhole,dogs,Rana,position,Custody,near,Bandipur,Safari,Center2015ರಿಂದ ಅರಣ್ಯ ಅಪರಾಧ ಪತ್ತೆಯಲ್ಲಿ ಬಂಡೀಪುರ ಅರಣ್ಯ ಇಲಾಖೆಯು ‘ರಾಣಾ’ ಎಂಬ ಜರ್ಮನ್‌ ಶೆಫರ್ಡ್‌ ತಳಿಯ ನಾಯಿಯನ್ನು ಬಳಸಿಕೊಳ್ಳುತ್ತಿದೆ. ಈಗಾಗಲೇ ರಾಣಾ ನಿವೃತ್ತಿ ಅಂಚಿಗೆ ಬಂದಿರುವುದರಿಂದ ರಾಣಾ ಬಳಿಕ ಅದರ ಸ್ಥಾನ ತುಂಬಲು ನಮ್ಮ ರಾಜ್ಯದ ತಳಿಯಾದ ಮುಧೋಳ್ ನಾಯಿಗಳನ್ನು ತರಿಸಿದ್ದು, ಬಂಡೀಪುರ ಸಫಾರಿ ಕೇಂದ್ರದ ಬಳಿ ಪಾಲನೆ ಮಾಡಲಾಗುತ್ತಿದೆ.Two,mudhole,dogs,Rana,position,Custody,near,Bandipur,Safari,Center

ಇನ್ನು, ಮುಧೋಳ್ ನಾಯಿ ಮರಿಗಳಿಗೆ ಎಲ್ಲಿ ತರಬೇತಿ ಕೊಡಬೇಕು ಎಂದು ಅರಣ್ಯ ಇಲಾಖೆ ಚಿಂತಿಸುತ್ತಿದ್ದು, ಬೆಂಗಳೂರು ಇಲ್ಲವೇ ಮೈಸೂರಿನಲ್ಲಿ ಕೊಡಿಸುವ ಸಾಧ್ಯತೆ ದಟ್ಟವಾಗಿದೆ. ರಾಣಾಗೆ ಭೋಪಾಲ್​ನಲ್ಲಿ ಬರೋಬ್ಬರಿ 11 ತಿಂಗಳು ಕಠಿಣ ತರಬೇತಿ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

key words : Two-mudhole-dogs-Rana-position-Custody-near- Bandipur-Safari-Center