ಇಬ್ಬರು ಗಾಂಜಾ ಮಾರಾಟಗಾರರ ಬಂಧನ: 2.16 ಲಕ್ಷ ಮೌಲ್ಯದ ಗಾಂಜಾ ವಶ

Promotion

ಚಾಮರಾಜನಗರ,ಸೆಪ್ಟೆಂಬರ್,23,2020(www.justkannada.in) : ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಇಬ್ಬರು ಗಾಂಜಾ ಮಾರಾಟಗಾರರನ್ನು ಪ್ರತ್ಯೇಕವಾಗಿ ಬಂಧಿಸಿ, ಸುಮಾರು 2.16 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.jk-logo-justkannada-logoಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯದಲ್ಲಿ ಈ ಘಟನೆ ನಡೆದಿದೆ. ಜಲ್ಲಿಪಾಳ್ಯ ಗ್ರಾಮದ ವೀರಪ್ಪನ್(74) ಹಾಗೂ ಶೇಷುರಾಜು(52) ಬಂಧಿತರಾಗಿದ್ದಾರೆ. ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ರಾಮಾಪುರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಮಾಲು ಸಮೇತ ಬಂಧಿಸಿದ್ದಾರೆ.

Two,marijuana,dealers,arrested,2.16 lakh,marijuana,seized

ಬಂಧಿತರಿಂದ ಸುಮಾರು 2.16 ಲಕ್ಷ ರೂ. ಬೆಲೆಯ 2.6ಕೆಜಿ ಒಣಗಿದ ಗಾಂಜಾ ವಶಪಡಿಸಿಕೊಂಡು ರಾಮಾಪುರ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

key words : Two-marijuana-dealers-arrested-2.16 lakh-marijuana-seized