ಕಾಡಿನ ಮಕ್ಕಳಿಗೆ ನಾಡಹಬ್ಬ ದಸರಾ ಸಂಭ್ರಮಕ್ಕೆ ತೊಡಕು: ಈ ಬಾರಿ ಮಾವುತ ಹಾಗೂ ಕಾವಾಡಿಗರಿಗೆ ಮಾತ್ರ ಆಹ್ವಾನ..

ಮೈಸೂರು,ಸೆಪ್ಟಂಬರ್,23,2020(www.justkannada.in):  ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾದಿಂದ ಹಬ್ಬ ಹರಿದಿನಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಮಹಾಮಾರಿಯಿಂದಾಗಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನ ಸರಳ ಮತ್ತು ಸಂಪ್ರದಾಯಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು ಈ ಹಿನ್ನೆಲೆ  ಕಾಡಿನ ಮಕ್ಕಳಿಗೆ ನಾಡಹಬ್ಬ ಸಂಭ್ರಮಕ್ಕೆ ಕೊಕ್ಕೆ ಬಿದ್ದಿದೆ.jk-logo-justkannada-logo

ಈ ಬಾರಿ ಆನೆಗಳ ಜತೆ ಮಾವುತ ಹಾಗೂ ಕಾವಾಡಿಗರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ನಿರ್ಬಂಧಿಸಲಾಗಿದೆ. ಪ್ರತಿಬಾರಿ ದಸರಾ ಆನೆಗಳ ಜತೆ ಮಾವುತ ಹಾಗೂ ಕಾವಾಡಿಗರ ಕುಟುಂಬಸ್ಥರು ಆನೆಗಳ ಜೊತೆ ಲಾರಿಯಲ್ಲಿ ಮೈಸೂರಿಗೆ ಆಗಮಿಸುತ್ತಿದ್ದರು. ಅರಮನೆ ಆವರಣದಲ್ಲಿ ಬೀಡು ಬಿಟ್ಟು ಎರಡು ತಿಂಗಳು ಉಳಿಯುತ್ತಿದ್ದರು. ಮಾವುತ, ಕಾವಾಡಿಗರ ಮಕ್ಕಳಿಗೆ ಟೆಂಟ್ ಶಾಲೆ, ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗುತ್ತಿತ್ತು.

ಆದರೆ ಕೋವಿಡ್ ಹಿನ್ನೆಲೆ ದೈಹಿಕ ಅಂತರದ ದೃಷ್ಟಿಯಿಂದ ಇದಕ್ಕೆಲ್ಲ ಬ್ರೇಕ್ ಹಾಕಲಾಗಿದೆ. ಈ ಬಾರಿ ಆನೆಗಳ ಜತೆ ಮಾವುತ ಮತ್ತು ಕಾವಾಡಿಗಳನ್ನು ಮಾತ್ರ ಕರೆತರಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ. ಇದರಿಂದಾಗಿ ಮೈಸೂರಿಗೆ ಆಗಮಿಸಿ ನಾಡಹಬ್ಬ ಸಂಭ್ರಮ ಕಣ್ತುಂಬಿಕಕೊಳ್ಳುತ್ತಿದ್ದ ಮಾವುತಮ, ಕಾವಾಡಿ ಕುಟುಂಬಸ್ಥರಿಗೆ ಕೊರೋನಾ ಮಹಾಮಾರಿ ತಣ್ಣೀರೆರೆಚಿದೆ.mysore –dasara- kavadi- mavutha’s-Children-celebration

ಇನ್ನು ಮೈಸೂರು ದಸರಾ ಆನೆಗಳಿಗೆ ಅರಮನೆ ಒಳಗಡೆ ಮಾತ್ರ ತಾಲೀಮು ನಡೆಯಲಿದ್ದು ಅರಮನೆ ಗೇಟ್ ಅನ್ನ ಆನೆಗಳು ದಾಟುವುದಿಲ್ಲ. ಜತೆಗೆ ಆನೆಗಳ ವೀಕ್ಷಣೆಗೆ ಸಾರ್ವಜನಿಕರ ನಿರ್ಬಂಧ ವಿಧಿಸಲಾಗಿದ್ದು  ಮಾವುತ ಕಾವಾಡಿಗಳನ್ನು ಜನರ ಸಂಪರ್ಕ ಇಲ್ಲದಂತೆ ಇರಲು ಸೂಚನೆ ನೀಡಲಾಗಿದೆ. ಆನೆಗಳಷ್ಟೆ ಮಾವುತರ ಆರೋಗ್ಯ ಕೂಡ ಮುಖ್ಯವಾಗಿದ್ದು ಈ ಕಾರಣದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Key words: mysore –dasara- kavadi- mavutha’s-Children-celebration