“ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 8 ದ್ವಿಚಕ್ರವಾಹನಗಳು ವಶ”

Promotion

ಮೈಸೂರು, ಫೆಬ್ರವರಿ, 12,2021(www.justkannada.in)  : ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ, 8 ಲಕ್ಷ ಮೌಲ್ಯದ 8 ದ್ವಿಚಕ್ರವಾಹನಗಳನ್ನು ಉದಯಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.jk

ಉದಯಗಿರಿ ಠಾಣಾ ವ್ಯಾಪ್ತಿಯ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆ ಕಾರ್ಯದ ಸಂಬಂಧ ಉದಯಗಿರಿ ಪೊಲೀಸರು ಅಲಿ ಪಾರ್ಕ್ ಬಳಿ ಗಸ್ತಿನಲ್ಲಿದ್ದಾಗ ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ಮೊಹಮ್ಮದ್ ಶೋಹೇಬ್ ಬಿನ್ ಬಾಬು ಸಾಹೇಬ್(19), ಅರ್ಬಾಜ್ ಖಾನ್ ಅಲಿಯಾಸ ಗೋರು ಬಿನ್ ನುಸ್ರತ್ ಬೇಗ್(19) ಎಂಬುವವರನ್ನು ಅನುಮಾನದ ಮೇರೆಗೆ ತಡೆದು ನಿಲ್ಲಿಸಿ ವಿಚಾರಣೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ಇಬ್ಬರು ಕಳ್ಳರು ಸೇರಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ವೇಳೆಯಲ್ಲಿ ಮನೆಗಳ ಮುಂಭಾಗ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.

ಬಂಧಿತರಿಂದ 8 ಲಕ್ಷ ಮೌಲ್ಯದ 8 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉದಯಗಿರಿ ಠಾಣೆ-2, ಸರಸ್ವತಿಪುರಂ-1, ನಜರ್ ಬಾದ್ -2, ನರಸಿಂಹರಾಜ-1, ದೇವರಾಜ-1,ಆಲನಹಳ್ಳಿ ಠಾಣೆಯ-1 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

Two,Bikes,theft,Arrest,8 lakhs,8 bikes,seize

ಮೈಸೂರು ನಗರ ಡಿಸಿಪಿ ಗೀತಾಪ್ರಸನ್ನ, ದೇವರಾಜ ವಿಭಾಗದ ಎಸಿಪಿ ಎಂ.ಎನ್.ಶಶಿಧರ್ ಮಾರ್ಗದರ್ಶನದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸೆಪೆಕ್ಟರ್ ಎನ್.ಎಂ.ಪೂಣಚ್ಚ ಇತರೆ ಸಿಬ್ಬಂದಿ ದ್ವಿಚಕ್ರ ವಾಹನ ಸವಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

key words : Two-Bikes-theft-Arrest-8 lakhs-8 bikes-seize