ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲು…   

Promotion

ಉತ್ತರ ಕನ್ನಡ,ಮೇ,11,2019(www.justkannada.in): ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಂಚಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದನ್ ಹೆಗಡೆ ಮತ್ತು ವೆಂಕಟೇಶ್ ಹೆಗ್ಗಡೆ ಮೃತಪಟ್ಟ ಯುವಕರು. ಮೃತ ಯುವಕರು ಸೇರಿದಂತೆ ನಾಲ್ವರು ಸ್ನೇಹಿತರು ಗ್ರಾಮದಲ್ಲಿ ಹರಿಯುವ ಅಘನಾಶಿನಿ ನದಿಯಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ವೆಂಕಟೇಶ್ ಮತ್ತು ಚಂದನ್ ಹೆಗ್ಗಡೆ ನೀರುಪಾಲಾಗಿದ್ದಾರೆ.

ಈ ಕುರಿತು ಸಿದ್ದರಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Keywords: Two- young-men – swimming –river-death