ಪ್ರತ್ಯೇಕ ಘಟನೆ: ಮಹಾಮಳೆಗೆ ಮನೆಯ ಗೋಡೆ ಕುಸಿದು ಇಬ್ಬರು ಮಹಿಳೆಯರು ಸಾವು…

Promotion

ಹುಬ್ಬಳ್ಳಿ/ಉಡುಪಿ.ಆ,8,2019(www.justkannada.in):  ರಾಜ್ಯದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಇಂದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಗೋಡೆ ಕುಸಿದು ಹುಬ್ಬಳ್ಳಿಯಲ್ಲಿ ಓರ್ವ ಮಹಿಳೆ ಮತ್ತು ಉಡುಪಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಮಳೆಯರಾಯನ ಅಬ್ಬರ ಜೋರಾಗಿದ್ದು ಮನೆಯ ಗೋಡೆ ಕುಸಿದು  ಗೃಹಿಣಿ ಸಾವನ್ನಪ್ಪಿದ್ದಾರೆ, ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚನ್ನಮ್ಮ ಪಾಲಿಕಾರ್(45)‌ ಮನೆಯ ಗೋಡೆ ಕುಸಿದು ‌ಮೃತಪಟ್ಟ ಮಹಿಳೆ. ಮಹಾಮಳೆಯಿಂದಾಗಿ ಈ ಗೋಡೆ ಕುಸಿದು ಈ ಘಟನೆ ಸಂಭವಿಸಿದೆ.

ಇನ್ನೊಂದೆಡೆ  ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಪೆತ್ರಿ ಗ್ರಾಮದಲ್ಲಿ ಮಳೆಯಿಂದಾಗಿ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ.  ಇಲ್ಲಿನ ನಿವಾಸಿ ಗಂಗಾ ಮರಕಾಳ್ತಿ(52) ಮೃತಪಟ್ಟವರು. ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆ ಕುಸಿದು ಗಂಗಾ ಅವರು ಗಂಭೀರ ಗಾಯಗೊಂಡಿದ್ದರು ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದೊಯ್ದರೂ ಸಾವನ್ನಪ್ಪಿದ್ದಾರೆ.

 

Key words: Two women –die- after –wall- collapses-udupi-hubbli