ಮೂವರು ಸಾಧಕರಿಗೆ 2019ನೇ ಸಾಲಿನ ‘ಸಂಸ್ಕೃತ ಸಿರಿ’ ಪ್ರಶಸ್ತಿ…

ಬೆಂಗಳೂರು,8,2019(www.justkannada.in):  ಪ್ರಸ್ತುತ ವರ್ಷದ ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕೊಡಮಾಡುವ  ‘ಸಂಸ್ಕೃತಿ ಸಿರಿ’ ಪ್ರಶಸ್ತಿಗೆ  ಮೂವರು ಸಾಧಕರು ಭಾಜನರಾಗಿದ್ದಾರೆ.

ಪ್ರಸಿದ್ಧ ಕವಿ ಮತ್ತು ಲೇಖಕರಾದ  ಹೆಚ್.ಎಸ್ ವೆಂಕಟೇಶ ಮೂರ್ತಿ , ಶ್ರೀಕೃಷ್ಣ ಪಾರಿಜಾತ ಜನಪದ ನಾಟಕದ  ಸುಪ್ರಸಿದ್ಧ ಕಲಾವಿದೆ ಮಲ್ಲವ್ವ ಮ್ಯಾಗೇರಿ ಮತ್ತು ಪ್ರಸಿದ್ಧ ಸುಗಮ ಸಂಗೀತ ನಿರ್ದೇಶಕ ಬಿ.ವಿ ಶ್ರೀನಿವಾಸ್ ಅವರು ಸಂಸ್ಕೃತಿ ಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

18-08-2019ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ಪ್ರಶಸ್ತಿ ಪುರಸ್ಕೃತರಿಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು  ಪ್ರದಾನ ಮಾಡಲಿದ್ದಾರೆ.  ಹೈಕೋರ್ಟ್ ನ ನಿವೃತ್ತ ಮುಖ್ಯನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ ಎಂ. ಚಂದ್ರ ಶೇಖರ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

Key words: Sanskrita siri Award- 2019- three achievers- Dr. Waymagal Narayanaswamy.