ಮಕರ ಸಂಕ್ರಾಂತಿ ಹಿನ್ನೆಲೆ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಇಬ್ಬರು ನೀರುಪಾಲು.

Promotion

ರಾಯಚೂರು,ಜನವರಿ,12,2022(www.justkannada.in):  ಮಕರ ಸಂಕ್ರಾಂತಿ ಹಬ್ಬ ಹಿನ್ನೆಲೆ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಇಬ್ಬರು ಸ್ನೇಹಿತರು ನೀರುಪಾಲಾಗಿರುವ  ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು ತಾಲೂಕಿನ ಶಕ್ತಿನಗರದ ಬಳಿ ಕೃಷ್ಣಾ ನದಿಯಲ್ಲಿ ಈ ಘಟನೆ ನಡೆದಿದೆ. ಗಣೇಶ್(42), ಉದಯ್ ಕುಮಾರ್(43) ಮೃತಪಟ್ಟವರು.

ಸಂಕ್ರಾಂತಿ ಹಬ್ಬ ಹಿನ್ನೆಲೆ ಪೂಜೆ ಹಾಗೂ ಪುಣ್ಯ ಸ್ನಾನಕ್ಕೆ ಎಂದು ಐದಾರು ಜನ ಸ್ನೇಹಿತರು ಕೃಷ್ಣಾ ನದಿಗೆ ಹೋಗಿದ್ದರು. ಈ ವೇಳೆ ಗಣೇಶ್ ಮತ್ತು ಉದಯ್ ಕುಮಾರ್ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗಣೇಶ್ ಶವ ಪತ್ತೆಯಾಗಿದ್ದು ಉದಯ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತ ಗಣೇಶ್ ರಾಯಚೂರಿನ ನಿಜಲಿಂಗಪ್ಪ ಕಾಲೋನಿ ನಿವಾಸಿ ಹಾಗೂ ಉದಯ್‌ಕುಮಾರ್ ರಾಯಚೂರಿನ ಕೆಇಬಿ ಕಾಲೋನಿಯ ನಿವಾಸಿ. ಸದ್ಯ ಶಕ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: two- water death-sankranthi