ಟೀಂ ಇಂಡಿಯಾ ಕೋಚ್ ಹುದ್ದೆ: ಎರಡು ಸಾವಿರ ಅರ್ಜಿ !

Promotion

ಹೊಸದಿಲ್ಲಿ, ಆಗಸ್ಟ್ 02, 2019 (www.justkannada.in): ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಜಾಹೀರಾತು ಮೂಲಕ ಅರ್ಜಿ ಆಹ್ವಾನಿಸಿದ್ದ ಬಿಸಿಸಿಐ 2,000ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿದೆ.

ಅರ್ಜಿ ಸಲ್ಲಿಸಿದವರ ಪೈಕಿ ಪ್ರಮುಖ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎಂದು ಮುಂಬೈ ಮಿರರ್ ವರದಿ ಮಾಡಿದೆ. ರವಿ ಶಾಸ್ತ್ರಿ ನೇತೃತ್ವದ ಟೀಮ್ ಇಂಡಿಯಾದ ಕೋಚಿಂಗ್ ಸಿಬ್ಬಂದಿಯ ಗುತ್ತಿಗೆ ಅವಧಿ 2019ರ ವಿಶ್ವಕಪ್‌ನೊಂದಿಗೆ ಕೊನೆಗೊಂಡಿದೆ.

ನೂತನ ಕೋಚ್ ಆಯ್ಕೆಗೆ ಸಮಯ ತಗಲುವ ಕಾರಣ ಈಗಿನ ಸಿಬ್ಬಂದಿಯನ್ನು ವೆಸ್ಟ್‌ಇಂಡೀಸ್ ಪ್ರವಾಸ ಮುಗಿಯುವ ತನಕ ಮುಂದುವರಿಸಲಾಗಿದೆ.