ಪಕ್ಷಕ್ಕೆ ವಾಪಸ್ ಆಗಲು ಮುಂದಾದ್ರೆ ಇಬ್ಬರು ಅತೃಪ್ತ ಶಾಸಕರು..? ಹೊಸಬಾಂಬ್ ಸಿಡಿಸಿದ ಮಾಜಿ ಸಚಿವ ಎಂ.ಬಿಪಾಟೀಲ್..

Promotion

ಬೆಂಗಳೂರು,ಜು,27,2019(www.justkannada.in):  ಇಬ್ಬರು ಅತೃಪ್ತ ಶಾಸಕರು ಪಕ್ಷಕ್ಕೆ ವಾಪಸ್ ಬರಲು ಸಿದ್ದರಾಮಯ್ಯಗೆ ಕಾಲ್ ಮಾಡಿದ್ದರು. ಆದರೆ ಸಿದ್ದರಾಮಯ್ಯ ಕಾಲ್ ಪಿಕ್ ಮಾಡಲಿಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮುಂಬೈನಲ್ಲಿರುವ ಅತೃಪ್ತ ಶಾಸಕರ ಪೈಕಿ ಮೂವರು ಶಾಸಕರನ್ನ ಈಗಾಗಲೇ ಅನರ್ಹ ಮಾಡಿ ಸ್ಪೀಕರ್ ರಮೇಶ್ ಕುಮಾರ್ ಆದೇಶಿಸಿದ್ದಾರೆ.  ಹೀಗಾಗಿ ಉಳಿದ ಶಾಸಕರು ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಎಂ.ಬಿ ಪಾಟೀಲ್  ಇಬ್ಬರು ಅತೃಪ್ತ ಶಾಸಕರು  ವಾಪಾಸ್ ಆಗುವ ಕುರಿತು ಹೊಸ ಬಾಂಬ್ ಸಿಡಿದ್ದಾರೆ. ಇಬ್ಬರು ಶಾಸಕರು ಸಿದ್ದರಾಮಯ್ಯಗೆ ಫೋನ್ ಮಾಡಿ ಪಕ್ಷಕ್ಕೆ ವಾಪಸ್ ಆಗಲು ನಿರ್ಧರಿಸಿದ್ದರು. ಇನ್ನು ಉಳಿದ ಅತೃಪ್ತ ಶಾಸಕರು ಯಾರನ್ನ ಟಚ್ ಮಾಡಿದ್ದಾರೆ ಗೊತ್ತಿಲ್ಲ ಎಂದರು.

ಇನ್ನು ಬಿಜೆಪಿ ಸರ್ಕಾರದ ಆಯುಷ್ಯ ಬಗ್ಗೆ ಭವಿಷ್ಯ ನುಡಿದ ಮಾಜಿ ಸಚಿವ ಎಂ.ಬಿ ಪಾಟೀಲ್  ವರ್ಷದೊಳಗೆ ಬಿಜೆಪಿ ಸರ್ಕಾರ ಪತನವಾಗಲಿದೆ. ಈಗ ರಚನೆಯಾಗಿರುವ ಸರ್ಕಾರ  ಅನೈತಿಕವಾಗಿದೆ.  ಇದಕ್ಕೆ ಎಕ್ಸ್ಪೈರಿ  ಡೇಟ್ 6 ತಿಂಗಳು ಮಾತ್ರ. 6 ತಿಂಗಳು ಅಥವಾ ವರ್ಷದೊಳಗೆ ಈ ಸರ್ಕಾರ ಬೀಳುತ್ತೆ.  ಬಿಎಸ್ ವೈ ದುರಾಸೆಯಿಂದ ಸಿಎಂ ಆಗಿದ್ದಾರೆ.  ಅವರು ರಾಜಕೀಯ ಜೀವನದ ಕಡೇ ಹಂತದಲ್ಲಿದ್ದಾರೆ ಎಂದು ಟೀಕಿಸಿದರು.

Key words: Two -rebel MLAs -decide – return –party- Former Minister -MBpatil