ಹುಟ್ಟೂರು ಬೂಕನಕೆರೆಗೆ ಆಗಮಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ…

ಮಂಡ್ಯ,ಜು,27,2019(www.justkannada.in):  ಹುಟ್ಟೂರು ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಮಿಸಿದ್ದಾರೆ.

ಬೆಂಗಳೂರಿನಿಂದ ಮಂಡ್ಯದ ತೂಬಿನಕೆರೆ ಹೆಲಿಪ್ಯಾಡ್ ಗೆ ಆಗಮಿಸಿದ ಸಿಎಂ  ಬಿಎಸ್ ಯಡಿಯೂರಪ್ಪ ರಸ್ತೆ ಮೂಲಕ ಬೂಕನಕೆರೆಗೆ ಆಗಮಿಸಿದರು. ಸಿಎಂ ಯಡಿಯೂರಪ್ಪಗೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು.

ಇನ್ನು ಮಂಡ್ಯದ ತೂಬಿನಕೆರೆ ಹೆಲಿಪ್ಯಾಡ್ ಬಳಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಹುಟ್ಟೂರು ಬೂಕನಕೆರೆಯಲ್ಲಿ ಗವಿಮಠದ ಮನೆವರ ಪೂಜೆ ಬಂದಿದ್ದೇನೆ. ಬಳಿಕ ಅಲ್ಲಿಂದ ಮೇಲುಕೋಟೆ ಚಲುವರಾಯಸ್ವಾಮಿ ದೇವಾಲಯಕ್ಕೆ ಭೇಟಿ ಕೊಡ್ತಿನಿ. ಹುಟ್ಟೂರಿಗೆ ಭೇಟಿ ನೀಡ್ತಿರೋದು ಸಂತಸದ ವಿಷಯ. ಹುಟ್ಟೂರಿನ ಅಭಿವೃದ್ದಿಗೆ ಮತ್ತಷ್ಟು‌ ಶ್ರಮಿಸುವ ಕೆಲಸ ಮಾಡ್ತಿನಿ ಎಂದು ಭರವಸೆ ನೀಡಿದರು.

Key words: CM BS Yeddyurappa- arrives – Bukkanakere-mandya