ಅತ್ಯಾಚಾರ ಸಂತ್ರಸ್ತೆಯಿಂದ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳು….

Promotion

ಮೈಸೂರು,ಜು,9,2020(www.justkannada.in): ಅತ್ಯಾಚಾರ ಸಂತ್ರಸ್ತೆಯಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೇಬಲ್ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.jk-logo-justkannada-logo

ಮೇಟಗಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್  ರಾಘವೇಂದ್ರ ಮತ್ತು ಕಾನ್ಸ್‌ಟೇಬಲ್ ಭೀಮಣ್ಣ ಎಂಬವರು ಬುಧವಾರ ಸಂಜೆ ಖಾಸಗಿ ವಸತಿಗೃಹವೊಂದರಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬರಿಂದ 75 ಸಾವಿರ ಲಂಚ ಪಡೆಯುತ್ತಿರುವ ವೇಳೆ ದಾಳಿ ಮಾಡಿದ ಎಸಿಬಿ ಡಿವೈಎಸ್ಪಿ ಪರುಶುರಾಮಪ್ಪ ನೇತೃತ್ವದ ತಂಡ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದೆ.two-police-acb-trap-bribes-mysore

ಶಿವಮೊಗ್ಗ ಮೂಲದ ಯುವತಿಯನ್ನು ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಬಂಧಿಸಲು ರಾಘವೇಂದ್ರ ೧ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಸಂತ್ರಸ್ತೆ ಹಣ ನೀಡಿರಲಿಲ್ಲ. ನಂತರ, ಆರೋಪಿ ಜಾಮೀನು ತೆಗೆದುಕೊಂಡ. ಬಳಿಕ ದೋಷಾರೋಪಣೆ ಪಟ್ಟಿ ಸಲ್ಲಿಸಿಲು ಕಠಿಣವಾದ ಸೆಕ್ಷನ್‌ಗಳನ್ನು ಹಾಕಲು ನೀಡಲೇಬೇಕು ಎಂದು ರಾಘವೇಂದ್ರ ಕಾನ್ಸ್‌ಸ್ಟೆಬಲ್ ಭೀಮಣ್ಣ ಮೂಲಕ ಬೇಡಿಕೆ ಇಟ್ಟಿದ್ದರು. ಇದನ್ನು ಎಸಿಬಿ ಅವರಿಗೆ ತಿಳಿಸಿದ ಸಂತ್ರಸ್ತೆಯು, ೭೫ ಸಾವಿರ ರೂ. ಅನ್ನು ಖಾಸಗಿ ವಸತಿ ಗೃಹವೊಂದರಲ್ಲಿ ನೀಡುವಾಗ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

Key words: Two police- – ACB -trap – bribes – mysore