ಸುಪ್ರೀಂಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಕರ್ನಾಟಕ ಮೂಲದ ನ್ಯಾ. ಅರವಿಂದ್ ಕುಮಾರ್ ಸೇರಿ ಇಬ್ಬರು ಪ್ರಮಾಣವಚನ.

ನವದೆಹಲಿ,ಫೆಬ್ರವರಿ,13,2023(www.justkannada.in): ಸುಪ್ರೀಂಕೋರ್ಟ್​ಗೆ ನೂತನ ನ್ಯಾಯಮೂರ್ತಿಗಳಾಗಿ ಕರ್ನಾಟಕ ಮೂಲದ  ನ್ಯಾ. ಅರವಿಂದ್ ಕುಮಾರ್ ಮತ್ತು ನ್ಯಾ.ರಾಜೇಶ್ ಬಿಂದಲ್  ಪ್ರಮಾಣ ವಚನ ಸ್ವೀಕರಿಸಿದರು.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್  ಅವರು ಇಂದು ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು. ಈ ಇಬ್ಬರ ನೇಮಕದೊಂದಿಗೆ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 34 ಆಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪೂರ್ಣಪ್ರಮಾಣದಲ್ಲಿ ಜಡ್ಜ್​ಗಳ ನೇಮಕವಾದಂತಾಗಿದೆ.

ಸುಪ್ರೀಂಕೋರ್ಟ್​ ನ ಕೊಲೆಜಿಯಂ ಜನವರಿ 31ರಂದು ನ್ಯಾ. ರಾಜೇಶ್ ಬಿಂದಲ್ ಮತ್ತು ನ್ಯಾ. ಅರವಿಂದ್ ಕುಮಾರ್ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಬಡ್ತಿ ನೀಡಲು ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವ ಮೊದಲು ನ್ಯಾ. ಅರವಿಂದ್ ಕುಮಾರ್ ಅವರು ಗುಜರಾತ್ ಹೈಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದರು. ನ್ಯಾ. ರಾಜೇಶ್ ಬಿಂದಲ್ ಅವರು ಅಲಹಾಬಾದ್ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರಾಗಿದ್ದರು.

Key words: two- new justices – Supreme Court- oath.