ರಾಜ್ಯಕ್ಕೆ ಪ್ರಧಾನಿ ಮೋದಿ ಬಂದ್ರೆ 10 ಪರ್ಸೆಂಟ್ ಮತ ಹೆಚ್ಚಾಗುತ್ತೆ ಅನ್ನೋ ಭಯ ಕಾಂಗ್ರೆಸ್ ಗೆ- ಶಾಸಕ ಸಿ.ಟಿ ರವಿ.

ಬೆಂಗಳೂರು,ಫೆಬ್ರವರಿ,13,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಭೇಟಿ ನೀಡುತ್ತಿರುವ  ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಸಿ.ಟಿ ರವಿ, ರಾಜ್ಯಕ್ಕೆ ಮೋದಿ ಬರುತ್ತಾರೆ  ಅಂದ್ರ ಹೆದರಿಕೆ ಯಾಕೆ ಮೋದಿ ಬಂದರೇ 10 ಪರ್ಸೆಂಟ್ ಮತ ಹೆಚ್ಚಾಗುತ್ತದೆ ಅನ್ನೋ ಭಯ ಕಾಂಗ್ರೆಸ್ ಗೆ.  ನೀರು ಬಿಡೋಕೂ ಮೋದಿನೇ ಬರಬೇಕು ಎಂದಿದ್ದಾರೆ.  ಪ್ರಧಾನಿ ಮೋದಿಯವರು ಲಕ್ಷಾಂತರ ಮನೆಗಳಿಗೆ ನಲ್ಲಿ ನೀರು ಒದಗಿಸಿದ್ದಾರೆ ಎಂದು ಕುಟುಕಿದರು.

ಮೋದಿ ಅವರು ಕರ್ನಾಟಕಕ್ಕೆ ಮಾತ್ರ ಬರಲ್ಲ. ಮಹಾರಾಷ್ಟ್ರ ಬೇರೆ ರಾಜ್ಯಗಳಿಗೂ ಚುನಾವಣೆ ಇದ್ದ ವೇಳೆ ಹೋಗಿದ್ದಾರೆ. ತಮಿಳುನಾಡಲ್ಲಿ ಚುನಾವಣೆ ಇಲ್ಲ ಆದರೆ ಅಲ್ಲಿಗೂ ಹೋಗಿದ್ದಾರೆ. ಪ್ರಧಾನಿ ಮೋದಿ ಹಾಲಿಡೇ ರಾಜಕಾರಣಿಯಲ್ಲ. ಕ್ರಿಸ್ ಮಸ್ ಬಂದಾಗ ಮೋದಿ ವಿದೇಶಕ್ಕೆ ಹೋಗಲ್ಲ ಎಂದು ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿಗೆ ಸಿ.ಟಿ ರವಿ ಪರೋಕ್ಷ ಟಾಂಗ್ ನೀಡಿದರು.

key words: Congress-fear-Modi – vote -increase – 10 percent-MLA -CT Ravi