ಪಬ್ ನ ಮಹಡಿಯಿಂದ ಬಿದ್ದು ಇಬ್ಬರು ಸಾವು ಕೇಸ್: ಪಬ್ ಮಾಲೀಕ ಮತ್ತು  ಮ್ಯಾನೇಜರ್ ವಿರುದ್ದ ಎಫ್ ಐಆರ್…

Promotion

ಬೆಂಗಳೂರು,ಜೂ,22,2019(www.justkannada.in):ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿನ ಪಬ್ ವೊಂದರ  3ನೇ ಮಹಡಿಯಿಂದ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಪಬ್ ಮಾಲೀಕ ಮತ್ತು ಪಬ್ ಮ್ಯಾನೇಜರ್ ವಿರುದ್ದ ಪ್ರಕರಣ ದಾಖಲಾಗಿದೆ.

ಪವನ್ ಅತ್ತಾವರ್ ಹಾಗೂ ವೇದಾ ಆರ್  ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿರುವ ಆಶ್ ಬೀರ್ ಪಬ್ನಲ್ಲಿ  ಇಬ್ಬರು ಪಾರ್ಟಿ ಮಾಡಿದ್ದರು. ಪಬ್ ನ ಮೂರನೇ ಮಹಡಿಯಲ್ಲಿ ನಿಂತಿದ್ದ  ಇಬ್ಬರು ಆಯತಪ್ಪಿ ಮೂರನೇ ಮಹಡಿಯಿಂದ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದರು.

ಘಟನೆಯಲ್ಲಿ ಪವನ್ ಹಾಗೂ ವೇದಾ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಘಟನೆ ಸಂಬಂಧ ನಿರ್ಲಕ್ಷ್ಯ ಆರೋಪದಡಿ ಪಬ್ ಮಾಲೀಕ ಅಭಿಷೇಕ್ ಮತ್ತು ಮ್ಯಾನೇಜರ್ ಮಣಿ ವಿರುದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304ರಡಿ ಎಫ್ ಐಆರ್ ದಾಖಲಾಗಿದೆ.

Key words: Two dead-  falling –pub- FIR -against –manager- bangalore