ಮಹಾರಾಜ ಕಾಲೇಜಿನಲ್ಲಿ ಆ.10 ಮತ್ತು 11ರಂದು ರಾಷ್ಟ್ರೀಯ ವಿಚಾರ ಸಂಕಿರಣ.

ಮೈಸೂರು,ಆಗಸ್ಟ್,9,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಮಹಾರಾಜ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ಹಾಗೂ ಐಕ್ಯೂಎಸಿ ವತಿಯಿಂದ ಆಗಸ್ಟ್ 10, 11ರಂದು ‘ಶ್ರೀ ಬಸವೇಶ್ವರ ಮತ್ತು ಡಾ.ಭೀಮ್‌ ರಾವ್ ಅಂಬೇಡ್ಕರ್: ಭಾರತದ ಸಮತವಾದಿ ಸಮಾಜದ ವಾಸ್ತುಶಿಲ್ಪಿಗಳು’ ಎಂಬ ವಿಷಯದ ಬಗ್ಗೆ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

‌ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೆರವೇರಿಸಲಿದ್ದಾರೆ. ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಜೋಗನ್ ಶಂಕರ್ ಅವರು ಪ್ರಾಸ್ತಾವಿಕ ನುಡಿಗಳಾಡಲಿದ್ದಾರೆ.

ಪುಣೆ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಶಿಕಾಂತ್ ಪಟ್ಟನ್, ಹಂಪಿ ಕರ್ನಾಟಕ ವಿವಿ ಇತಿಹಾಸ ವಿಭಾಗದ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿಟ ವಿಮ್ಲ ಬ್ರಾಗ್ಸ್ , ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ರೇಖಾ ಕೆ ಜಾಧವ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ENGLISH SUMMARY….

Two-day National Seminar at Maharaja College
Mysuru, August 9, 2021 (www.justkannada.in): The Department of Social Science and IQC, University of Mysore has organized a two-day National level seminar on August 10 and 11, at Maharaja College, in Mysuru, on the topic, “Sri Basaveshwara and Dr. Bhimrao Ambedkar: Architects of Communist Society in India.”
Prof. G. Hemanth Kumar, Vice-Chancellor, University of Mysore, will inaugurate the program. Prof. Jogan Shankar, former Vice-Chancellor, Kuvempu University will deliver the introductory speech. Dr. Shashikanth Pattan, Principal, Pune Pharmacy College, Prof. N. Chinnaswamy Sosale, History Department, Hampi Karnatak University will be the resource person. Prof. Anita Vimla Brags, Principal Maharaja College, Dr. Rekha K. Jadhav, Professor, Social Science Department and others will participate.
Keywords: National seminar/ Maharaja College/ Mysuru/ University of Mysore

Key words:  two-day -national seminar- Maharaja College-mysore university