ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಸಹೋದರರು ಸಾವು.  

Promotion

ತುಮಕೂರು,ಜೂನ್,10,2023(www.justkannada.in): ಮೇಕೆಗೆ ಸೊಪ್ಪು ತರಲು ಹೋಗಿದ್ದ ಅಣ್ಣ ಮತ್ತು ತಮ್ಮ ಇಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವ   ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರನಕುಂಟೆಯಲ್ಲಿ ಘಟನೆ ನಡೆದಿದೆ.

ದ್ವಾರನಕುಂಟೆ ಗ್ರಾಮದ ಸತೀಶ್(25), ಪ್ರಸನ್ನ(29) ಮೃತಪಟ್ಟ ಸಹೋದರರು.  ಬಾವಿ ದಡದಲ್ಲಿ ಸೊಪ್ಪು ಕೊಯ್ಯುವಾಗ ಪ್ರಸನ್ನ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಬಾವಿಗೆ ಇಳಿದ ತಮ್ಮ ಸತೀಶ್ ಕೂಡ  ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪಿಎಸ್‌ಐ ಭುವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Two brothers –died- after- slipping – falling – well.