ಟ್ವಿಟ್ಟರ್ ಹೊಸ ವಿನ್ಯಾಸಕ್ಕೆ ಬಳಕೆದಾರರ ಆಕ್ರೋಶ: ಹಿಂದಿನ ವಿನ್ಯಾಸವನ್ನೇ ಮುಂದುವರೆಸುವಂತೆ ಒತ್ತಾಯಿಸಿದ ಟ್ವಿಟ್ಟಿಗರು

Promotion

ನವದೆಹಲಿ:ಜುಲೈ-18:(www.justkannada.in) ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿರುವ ಟ್ವಿಟರ್​ ಹೊಸ ವಿನ್ಯಾಸದಲ್ಲಿ ಪ್ರಸ್ತುತಗೊಂಡಿದೆ. ಟ್ವೀಟರ್ ನ ವಿಭಿನ್ನ ವಿನ್ಯಾಸವನ್ನು ಕಂಡು ಮುಂಜಾನೆಯೇ ಲಾಗಿನ್ ಆದವರು ಒಂದು ಕ್ಷಣ ಶಾಕ್ ಆಗಿದ್ದಾರೆ. ಟ್ವಿಟರ್ ವಿನ್ಯಾಸದಲ್ಲಿ ಬದಲಾವಣೆ ಆಗಿರುವುದಕ್ಕೆ ಬಳಕೆದಾದರು ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನ್ಯಾಸದಲ್ಲಿ ತಾನು ಮಾಡಿರುವ ಬದಲಾವಣೆ ಕುರಿತು ಟ್ವೀಟಿಗರಿಗೆ ಸಂದೇಶ ನೀಡಿರುವ ಟ್ವಿಟರ್​ ಸಂಸ್ಥೆ, ಅನುದಿನವೂ ಬಳಕೆದಾರರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂದು ನಾವು ಬಹುದೊಡ್ಡ ಹೆಜ್ಜೆಯನ್ನಿರಿಸಿದ್ದೇವೆ. ಈ ಹೊಸ ವಿನ್ಯಾಸವು, ಮತ್ತಷ್ಟು ಉತ್ತಮಪಡಿಸಿದ ಹಾಗೂ ಹೊಸ ಸೌಲಭ್ಯಗಳನ್ನು ತ್ವರಿತವಾಗಿ ನಿಮ್ಮೆಲ್ಲರಿಗೂ ತಲುಪಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದೆ.

ಆದರೆ, ವಿಶ್ವದಾದ್ಯಂತ ಇರುವ ಟ್ವೀಟಿಗರು ಟ್ವಿಟರ್​ನ ಹೊಸ ವಿನ್ಯಾಸಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಹೊಸ ವಿನ್ಯಾಸವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಕೆಲವರು ಬುಕ್​ಮಾರ್ಕ್​ನ ಹೊಸ ಸೌಲಭ್ಯವನ್ನು ಮೆಚ್ಚಿಕೊಂಡಿದ್ದರೂ, ವಿನ್ಯಾಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ಹೊಸ ಮಾಡುವ ಮೂಲಕ ಈಗ ಮತ್ತೊಮ್ಮೆ ಎಡವಟ್ಟು ಮಾಡಿದ್ದೀರಿ. ಇದರಿಂದ ತುಂಬಾ ಬೇಸರವಾಗುತ್ತಿದೆ. ನಾಲ್ಕು ವರ್ಷಗಳೆ ಕಳೆದರೂ ವಿಡಿಯೋ ಬಫರಿಂಗ್​ ಸಮಸ್ಯೆಯನ್ನು ಪರಿಹರಿಸಲು ನಿಮಗೆ ಸಾಧ್ಯವಾಗಿಲ್ಲ. ಅದನ್ನು ಮಾಡುವುದು ಬಿಟ್ಟು, ವಿನ್ಯಾಸವನ್ನು ಬದಲಿಸಿದ್ದೀರಿ. ಇದು ಸುಲಭ ಬಳಕೆಗೆ ನಿಲುಕದಾಗಿದೆ ಎಂದು ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹೊಸ ವಿನ್ಯಾಸ ನಮಗೆ ಹಿಂಸೆಯಾಗುತ್ತಿದೆ. ವಿನ್ಯಾಸ ಬದಲಾದರೂ ಎಡಿಟ್​ ಸೌಲಭ್ಯ ಕೊಟ್ಟಿಲ್ಲ. ಹಿಂದಿನ ವಿನ್ಯಾಸವೇ ಚೆನ್ನಾಗಿತ್ತು ಎಂದು ಗುಡುಗಿದ್ದಾರೆ.

ಟ್ವಿಟರ್ ಹೊಸ ವಿನ್ಯಾಸಕ್ಕೆ ಬಳಕೆದಾರರ ಆಕ್ರೋಶ: ಹಿಂದಿನೆ ವಿನ್ಯಾಸವನ್ನೇ ಮುಂದುವರೆಸುವಂತೆ ಒತ್ತಾಯಿಸಿದ ಟ್ವಿಟಿಗರು

Twitter rolled out a new and redesigned website layout for desktop and … ‘Take it Back’ Twitterati Enraged at the New, Redesigned Twitter.