Sunday, September 20, 2026

BDA Apartments

ಹೋಟೆಲ್ ನಿಂದ ಹೊರಹೋಗಿ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ‘ಕೈ’ ಶಾಸಕ..? BDA JK...
Home Front Page ಹೋಟೆಲ್ ನಿಂದ ಹೊರಹೋಗಿ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ‘ಕೈ’ ಶಾಸಕ..?

ಹೋಟೆಲ್ ನಿಂದ ಹೊರಹೋಗಿ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ‘ಕೈ’ ಶಾಸಕ..?

ಬೆಂಗಳೂರು,ಜು,18,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದು ಸಮ್ಮಿಶ್ರ ಸರ್ಕಾರದ ಅಳಿವು ಉಳಿವು ಇಂದು  ನಿರ್ಧಾರವಾಗಲಿದೆ. ಈ ಮಧ್ಯೆ ಕಾಂಗ್ರೆಸ್ ನ ಮತ್ತೊಬ್ಬ ಶಾಸಕ ವಿಶ್ವಾಸಮತಯಾಚನೆ ವೇಳೆ ಕೈಕೊಡುವ ಸಾಧ್ಯತೆ ಕಂಡು ಬಂದಿದೆ.

ಹೌದು, ಕಾಗವಾಡ ಕಾಂಗ್ರೆಸ್​​ ಶಾಸಕ ಶ್ರೀಮಂತ ಪಾಟೀಲ್ ರೆಸಾರ್ಟ್​ನಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಇದೀಗ ಕಾಂಗ್ರೆಸ್‌ ಗೆ ಮತ್ತೊಂದು ಶಾಕ್ ಕೊಟ್ಟಂತಾಗಿದೆ.

ಕಳೆದ ಎರಡು ದಿನಗಳಿಂದ ತಾಜ್​ ವಿವಾಂತ ಹೋಟೆಲ್​ನಲ್ಲಿದ್ದ ಕಾಂಗ್ರೆಸ್​ ಶಾಸಕರನ್ನ ನಿನ್ನೆ ದೇವನಹಳ್ಳಿ ಸಮೀಪದ ಪ್ರಕೃತಿ ರೆಸಾರ್ಟ್​ಗೆ ಶಿಫ್ಟ್​ ಮಾಡಲಾಗಿತ್ತು. ಈ ನಡುವೆ ನಿನ್ನೆ ರಾತ್ರಿ ಮಾತ್ರೆ ಖಾಲಿಯಾಗಿದೆ ತರಬೇಕು ಎಂದು ಶ್ರೀಮಂತ ಪಾಟೀಲ್ ಹೊರಗೆ ಹೋಗಿದ್ದು , ಅರ್ಧಗಂಟೆ ಬಳಿಕ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ . ಶಾಸಕ ಶ್ರೀಮಂತ್ ಪಾಟೀಲ್ ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ ಎನ್ನಲಾಗುತ್ತಿದೆ.

ಹೀಗಾಗಿ ಇಂದು ನಡೆಯುವ ವಿಶ್ವಾಸ ಮತ ಯಾಚನೆ ವೇಳೆಯಲ್ಲಿ ಶಾಸಕ ಶ್ರೀಮಂತಪಾಟೀಲ್‌ ಕೈಕೊಡುವ ಸಾಧ್ಯತೆ ಇದೆ.

Key words: congress MLA- contact -Congress leaders – leaving – hotel.