ಹಾರನ್ ಮಾಡಿದ್ದಕ್ಕೆ ಕಾರು ಅಡ್ಡಗಟ್ಟಿ ವ್ಯಕ್ತಿಗೆ ಬೈಕ್ ಸವಾರರಿಂದ ಚಾಕು ಇರಿತ.

Promotion

ತುಮಕೂರು,ನವೆಂಬರ್,28,2022(www.justkannada.in):  ಕ್ಷುಲ್ಲಕ ಕಾರಣಕ್ಕೆ ಕಾರು ಅಡ್ಡಗಟ್ಟಿ ವ್ಯಕ್ತಿಗೆ ಬೈಕ್ ಸವಾರರಿಬ್ಬರು ಚಾಕುವಿನಿಂದ ಇರಿದಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಬೈರೇನಹಳ್ಳಿಯಲ್ಲಿ ನಡೆದಿದೆ.

ನೆನ್ನೆ ಸಂಜೆ ಈ ಘಟನೆ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ಹೇಮಂತ್ ಎಂಬುವವರೇ  ಚಾಕು ಇರಿತಕ್ಕೊಳಗಾಗಿರುವವರು. ಬೆಂಗಳೂರು ಮೂಲದ ಯುವಕ ಹೇಮಂತ್ ಕಾರಿನಲ್ಲಿ ತೆರಳುಯತ್ತಿದ್ದ ವೇಳೆ ಹಾರನ್ ಮಾಡಿದ್ದಾರೆ.

ಹಾರನ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಬೈಕ್ ಸವಾರರಿಬ್ಬರು  ಏಕಾಏಕಿ ಕಾರು ಅಡ್ಡಗಟ್ಟಿ ಹೇಮಂತ್ ಗೆ 4 ರಿಂದ 5 ಬಾರಿ ಚಾಕುವಿನಿಂದ ಇರಿದಿದ್ದು ಯುವಕ ಹೇಮಂತ್ ಸ್ಥಿತಿ ಗಂಭೀರವಾಗಿದೆ. ಹೇಮಂತ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕೊರಟಗೆರೆ ಠಾಣಾ ಪೊಲೀಸರು ಬಲೆ ಬೀಸಿದ್ದಾರೆ.

Key words: tumkur-car- stopped – person -stabbed – biker.