ಆನೆ ದಂತ ಮಾರಾಟ ಮಾಡಲು ಯತ್ನ: ನಾಲ್ವರ ಬಂಧನ

Promotion

ಮೈಸೂರು, ನವೆಂಬರ್,3,2020(www.justkannada.in): ಮೈಸೂರಿನಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನ ಅರಣ್ಯ ಸಂಚಾರಿ ದಳ ಬಂಧಿಸಿದೆ.jk-logo-justkannada-logo

ಕೇರಳದ ತ್ರಿವೆಂಡ್ರಮ್ ನ ಪ್ರೆಸ್ಟಿನ್ ಸಿಲ್ವ, ಜಯಪ್ರಕಾಶ, ಮೈಸೂರಿನ ಉದಯಗಿರಿಯ ಮೋಹನ್, ರಮೇಶ್ ಬಂಧಿತರು. ಬಂಧಿತ ಆರೋಪಿಗಳು 25 ಕೆ.ಜಿ.ತೂಕವಿರುವ ಅಂದಾಜು 5 ಲಕ್ಷ ರೂ.ಮೌಲ್ಯದ 8 ದಂತಗಳನ್ನು ಮಾರಾಟ ಮಾಡಲು ಬನ್ನಿಮಂಟಪದ ಬ್ರಿಡ್ಜ್ ಬಳಿ ನಿಂತಿದ್ದರು.trying-sell-elephant-ivory-arrest-four-mysore

ಈ ಬಗ್ಗೆ ಮಾಹಿತಿ ತಿಳಿದ ಸಂಚಾರಿ ದಳ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ದಾಳಿ‌ ನಡೆಸಿ  ಆನೆ ದಂತ ಹಾಗೂ ಸ್ಕೂಟರ್ ಅನ್ನು ವಶಕ್ಕೆ ಪಡೆದು ‌ನಾಲ್ವರನ್ನು ಬಂಧಿಸಿದ್ದಾರೆ.

Key words: Trying – sell- elephant –ivory-Arrest –four-mysore