ಇಂದಿನಿಂದ ಹೈದರಾಬಾದ್, ತೆಲಂಗಾಣಕ್ಕೆ ಬಸ್ ಸಂಚಾರ ಪುನಾರಂಭ…

ಬೆಂಗಳೂರು,ನವೆಂಬರ್,3,2020(www.justkannada.in):  ದೇಶದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದು ಈ ನಡುವೆ ಲಾಕ್ ಡೌನ್ ಸಡಿಲಿಕೆ ಆಗಿರುವ  ಹಿನ್ನೆಲೆ, ಇಂದಿನಿಂದ ರಾಜ್ಯದಿಂದ ಹೈದರಾಬಾದ್, ತೆಲಂಗಾಣಕ್ಕೆ ಬಸ್ ಸಂಚಾರ ಪುನರಾರಂಭಗೊಂಡಿದೆ.jk-logo-justkannada-logo

ಅಂತರಾಜ್ಯ ಬಸ್ ಕಾರ್ಯಾಚರಣೆ ಕುರಿತು ಕೆಎಸ್ಆರ್ಟಿಸಿ ಪ್ರಕಟಣೆ ಹೊರಡಿಸಿದ್ದು, ಬರೋಬ್ಬರಿ 7 ತಿಂಗಳ ಬಳಿಕ ಹೈದರಾಬಾದ್ ಹಾಗೂ ತೆಲಂಗಾಣಕ್ಕೆ ಬಸ್ ಪುನಾರಂಭಗೊಂಡಿದೆ. ಬೆಂಗಳೂರು ಹಾಗೂ ಮೈಸೂರಿನಿಂದ ಬಸ್ ಗಳು ತೆಲಂಗಾಣ ಮತ್ತು ಹೈದರಾಬಾದ್ ಗೆ ಕಾರ್ಯಚರಣೆ ನಡೆಸಲಿದ್ದು, ಪ್ರಯಾಣಿಕರ ದಟ್ಟಣೆ ಅನುಗುಣವಾಗಿ ಬಸ್ ಗಳನ್ನ  ಬಿಡಲಾಗುತ್ತಿದೆ.bus-service-karnataka-to-hyderabad-telangana

ಇನ್ನು ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.  ಕೊರೋನಾ, ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂತರಾಜ್ಯ ಬಸ್ ಸಂಚಾರವನ್ನು ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಥಗಿತಗೊಳಿಸಿತ್ತು.

Key words: Bus -service- Karnataka-to –Hyderabad-Telangana