ಬಸ್ ಸಂಚಾರ ತಡೆಯಲು ಮುಂದಾದ ನಾಲ್ವರು ಸಾರಿಗೆ ಸಿಬ್ಬಂದಿಗಳು ಪೊಲೀಸರ ವಶಕ್ಕೆ…

Promotion

ಬೆಂಗಳೂರು,ಡಿಸೆಂಬರ್,12,2020(www.justkannada.in):  ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಸಹ ಮುಷ್ಕರ ಮುಂದುವರೆಸಿದ್ದು, ಈ ನಡುವೆ ಬಸ್ ಸಂಚಾರ ತಡೆಯಲು ಮುಂದಾದ ನಾಲ್ವರು ಸಾರಿಗೆ ಸಿಬ್ಬಂದಿಯನ್ನ ಉಪ್ಪಾರಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.logo-justkannada-mysore

ಸಾರಿಗೆ ನೌಕರರ ಮುಷ್ಕರ  ಹಿನ್ನೆಲೆ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಸಂಚಾರಕ್ಕೆ ಬಿಎಂಟಿಸಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದರು.transport-staff-strike-bangalore-bus-detained-police-fou

ಇನ್ನು ಬಸ್ ಸಂಚಾರ ತಡೆಯಲು ಯತ್ನಿಸುವವರ ವಿರುದ್ಧ ಕೇಸ್ ಹಾಕಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆ ಮೆಜೆಸ್ಟಿಕ್ ನಲ್ಲಿ ಬಸ್ ಸಂಚಾರ ತಡೆಯಲು ಮುಂದಾದ ನಾಲ್ವರು ಸಾರಿಗೆ ಸಿಬ್ಬಂದಿಗಳನ್ನ ಉಪ್ಪಾರಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: transport staff- strike –Bangalore-bus -detained –police -four