ಸಾರಿಗೆ ನೌಕರರ ಮುಷ್ಕರ ಕೊನೆಗೂ ಅಂತ್ಯ: ಸರ್ಕಾರಕ್ಕೆ ಮೂರು ತಿಂಗಳ ಗಡುವು…

ಬೆಂಗಳೂರು,ಡಿಸೆಂಬರ್,14,2020(www.justkannada.in): ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವುದು ಸೇರಿ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ರಾಜ್ಯ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಅಂತ್ಯವಾಗಿದೆ. I didn't knew CM BSY will think so cheaply - KPCC President D.K. Shivakumar

ಈ ಕುರಿತು ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಮಾಡಿದ್ದಾರೆ. ಸರ್ಕಾರಕ್ಕೆ ಮೂರು ತಿಂಗಳು ಗಡುವು ನೀಡುತ್ತೇವೆ. ಮೂರು ತಿಂಗಳಲ್ಲಿ ಬೇಡಿಕೆ ಈಡೇರದಿದ್ದರೇ ಮತ್ತೆ ಪ್ರತಿಭಟನೆ ನಡೆಸುತ್ತೇವೆ. ನಾಳೆಯಿಂದ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗುತ್ತಾರೆ ಎಂದರು.

ಅಲ್ಲದೇ ನಿನ್ನೆ ಸರ್ಕಾರ ಒಪ್ಪಿಗೆ ಸೂಚಿಸಿದ್ದ 9 ಬೇಡಿಕೆಗಳ ಬಗ್ಗೆ ಪರಿಷ್ಕರಣೆ ಮಾಡಿದ್ದೇವೆ.  ನಮ್ಮ ಮೊದಲ ಬೇಡಿಕೆ ಸರ್ಕಾರಿ ನೌಕರರನ್ನಾಗಿಸುವುದು. ಇದನ್ನ ಘೋಷಣೆ ಮಾಡಿಲ್ಲ. ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡಲೇಬೇಕು. ಒಂದಲ್ಲ ಎರಡು ವರ್ಷವಾದರೂ ಸರಿ.  ಇನ್ನು 6ನೇ ವೇತನ ಆಯೋಗ ಜಾರಿ 2021 ಜನವರಿಗೆ ಜಾರಿ, ಕಾನೂನಿನ ಪ್ರಕಾರವೇ ಜಾರಿಯಾಗುತ್ತದೆ.  ತಡೆಯಾಗಲ್ಲ ಎಂದರು.Transport employees- strike- ends-Three months -deadline - government.

ಸರ್ಕಾರದ ಪ್ರತಿನಿಧಿಯಾಗಿ ಪ್ರತಿಭಟನಾನಿರತ ಸ್ಥಳ ಫ್ರೀಡಂ ಪಾರ್ಕ್ ಗೆ ಬಂದಿದ್ದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ 10 ಬೇಡಿಕೆಗಳಲ್ಲಿ 9 ಬೇಡಿಕೆ ಈಡೇರಿಸಿದ ಬಗ್ಗೆ ಲಿಖಿತ ಪತ್ರ ನೀಡಿದ್ದರು. ಈ ಬಳಿಕ ಇನ್ನೇನು ಸುಖಾಂತ್ಯವಾಗೇ ಬಿಟ್ಟಿತ್ತು ಎನ್ನುವಾಗಲೇ ಇದೀಗ ಮತ್ತೊಂದು ಬಿಗಿ ಪಟ್ಟು ಹಿಡಿದಿದ್ದರು. ಸಾರಿಗೆ ಸಚಿವ ಲಕ್ಷ್ಮಣ್ ಸವದಿಯೇ ಸ್ಥಳಕ್ಕೆ ಆಗಮಿಸಿ, ಬೇಡಿಕೆ ಈಡೇರಿಸಿದಂತೆ ಲಿಖಿತ ಪತ್ರ ನೀಡೋದಕ್ಕೆ ಒತ್ತಾಯಿಸಿದ್ಧರು. ಇಂತಹ ಪ್ರತಿಭಟನಾ ನಿರತರನ್ನು ಪ್ರತಿಭಟನೆಯ ನೇತೃತ್ವ ವಹಿಸಿದ್ದಂತ ಕೋಡಿಹಳ್ಳಿ ಚಂದ್ರಶೇಖರ್ ಮನವೊಲಿಸಿದ ನಂತರ, ಮುಷ್ಕರ ಸುಖಾಂತ್ಯ ಕಂಡಿದೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ ಬೇಡಿಕೆ ಈಡೇರಿಸೋದಕ್ಕೆ 3 ತಿಂಗಳ ಗಡುವು ಕೂಡ ನೀಡಲಾಗಿದೆ.

English summary….

Transport Dept. employees withdraw their protest by giving 3 months deadline to govt.
Bengaluru, Dec. 14, 2020 (www.justkannada.in): The Transport Department employees who were protesting against the State Government demanding fulfillment of their various demands, including declaring them as government employees’ have withdrawn their protest, at last, sighing relief to the passengers.
Farmer leader Kodihalli Chandrashekar announced it formally regarding this. “We have given three months to the State Govt. to fulfill all our demands. If it fails to meet our demands, we will protest again. The employees will resume services from tomorrow,” he said.
“One of our major demands is to declare the transport department employees as government employees, which the government has not agreed. We won’t budge on this. Implementation of the 6th wage commission will come into force automatically from January 2021,” he added.Transport employees- strike- ends-Three months -deadline - government.
Keywords: Kodihalli Chandrashekar/ Transport Department/ protest/ three months deadline

key words: Transport employees- strike- ends-Three months -deadline – government.