“ಸಾರಿಗೆ ನೌಕರರ ಮುಷ್ಕರ  : ನೌಕರರ ಮೇಲೆ ಸರ್ಕಾರದಿಂದ ಹೊಸ ಅಸ್ತ್ರ”

Promotion

ಮೈಸೂರು,ಏಪ್ರಿಲ್,10,2021(www.justkannada.in) :  ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮೈಸೂರು ನಗರ ಸಾರಿಗೆ ಹಾಗೂ ಗ್ರಾಮಂತರ ಸಾರಿಗೆ ಸೇರಿದಂತೆ  ಹಲವಾರು ನೌಕರಿರಿಗೆ ಏಕಾಏಕಿ ವರ್ಗಾವಣೆ ಮಾಡಲಾಗಿದ್ದು,  ನೌಕರರ ಮೇಲೆ ಸರ್ಕಾರ ಹೊಸ ಅಸ್ತ್ರ ಪ್ರಯೋಗಿಸಿದೆ.Transport,Employees,Strike,employees,New,weapon,government  ಹೋರಾಟದ ಮುಂದಾಳತ್ವದಲ್ಲಿ ಇದ್ದ ಬಹುತೇಕರಿಗೆ ವರ್ಗಾವಣೆ ಬಿಸಿ ತಟ್ಟಿದ್ದು, ವರ್ಗಾವಣೆ ಮಾಡಿರುವ ನೌಕರರಿಗೆ 7 ದಿನಗಳ ಒಳಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳವಂತೆ ಆದೇಶ ಹೊರಡಿಸಿದೆ.

ಎರಡು ದಿನದ ಹಿಂದೆ, ಕರ್ತವ್ಯಕ್ಕೆ ಹಾಜರಾಗದಿದ್ದರೆ ವಸತಿ ಗೃಹಗಳಲ್ಲಿರುವ ನೌಕರರು ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್  ನೀಡಿದ್ದರು. ಈಗ ಹಲವು ವರ್ಷಗಳಿಂದ ಇಲ್ಲದ ವರ್ಗಾವಣೆ ಮಾಡಿದ್ದು, ಈ ಮೂಲಕ ಸರ್ಕಾರ ಪ್ರತಿಭಟನಕಾರರ ಬೆದರಿಸುವ ಪ್ರಯತ್ನಕ್ಕೆ ಮುಂದಾಗಿದೆ. ನಮ್ಮ ಹೋರಾಟ ಹತ್ತಿಕ್ಕಲು ಅಧಿಕಾರಿಗಳ ಕುತಂತ್ರ ಮಾಡುತ್ತಿದ್ದಾರೆ ಎಂದು ಸಾರಿಗೆ ನೌಕರರು ಅಸಮಾಧಾನವ್ಯಕ್ತಪಡಿಸಿದ್ದಾರೆ.

key words : Transport-Employees-Strike-employees-New-weapon-government