ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದೇ ಮೈಸೂರಿನಲ್ಲಿ ವರ್ಗಾವಣೆ ದಂಧೆ- ಶಾಸಕ ಸಾ.ರಾ ಮಹೇಶ್ ಆರೋಪ…

ಮೈಸೂರು,ಜೂ,5,2020(www.justkannada.in): ಮೈಸೂರಿನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದೆ ದಂಧೆ ನಡೆಯುತ್ತಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ. Transfer -  Mysore –former minister-Sara Mahesh -accused.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ  ಸಾ.ರಾ.ಮಹೇಶ್ ,ಮೈಸೂರು ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ. ಒಬ್ಬರು ಆ್ಯಕ್ಟಿಂಗ್, ಮತ್ತೊಬ್ಬರು ಅಧಿಕೃತ. ಅಬಕಾರಿ ಡಿಸಿ ಮೈಸೂರಿಗೆ ಬಂದು ಕೇವಲ 9 ತಿಂಗಳಾಗಿತ್ತು. ಏಕಾಏಕಿ ಯಾಕೆ ವರ್ಗಾವಣೆ ಮಾಡಲಾಯ್ತು ? ಯಾರು ಪತ್ರ ವ್ಯವಹಾರ ಮಾಡಿದ್ರು ? ಆ ಪ್ರಕರಣದಲ್ಲಿ ಸುಮಾರು 2 ಕೋಟಿ ರೂ. ವ್ಯವಹಾರ ನಡೆದಿರುವ ಮಾಹಿತಿ ಇದೆ ಲೋಕೋಪಯೋಗಿ ಇಲಾಖೆ ಎಇ ಹುದ್ದೆಗೆ ಇತ್ತೀಚೆಗೆ ನೇಮಕವಾಗಿದೆ.  50 ಲಕ್ಷ ರೂ. ಹಣ ಯಾರಿಗೆ ಹೋಗಿದೆ ? ಎಂದು ಪ್ರಶ್ನಿಸಿದರು.

ರೈಸ್ ಮಿಲ್‌ಗಳಿಂದ ಲಾರಿಗಟ್ಟಲೇ ಅಕ್ಕಿ ಕಲೆಕ್ಟ್ ಮಾಡಿದ್ದಾರೆ. ಅದು ಎಲ್ಲಿಗೆ ಹೋಯಿತು ಅಂತ ಬಹಿರಂಗ ಪಡಿಸಿ. ಈ ಬಗ್ಗೆ ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದೇನೆ. ಮಾಹಿತಿ ಬಹಿರಂಗಪಡಿಸದೇ ಇದ್ದರೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಸಾ.ರಾ ಮಹೇಶ್ ಎಚ್ಚರಿಸಿದರು.

ಹುಣಸೂರಿನ ಜನ ಅವರನ್ನು 90 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದರು.  ಈಗ ಅದರ ಅರ್ಧದಷ್ಟು ಮತಗಳಿಂದ ಸೋಲಿಸಿದ್ದಾರೆ.ಆ ಮಹಾಶಯನ ಹೆಸರು ನಾನು ಹೇಳುವುದಿಲ್ಲ ಎಂದು ಹೆಸರು ಹೇಳದೆ ಹೆಚ್. ವಿಶ್ವನಾಥ್ ಗೆ ಪರೋಕ್ಷ ಟಾಂಗ್ ನೀಡಿದರು.

Key words: Transfer –  Mysore –former minister-Sara Mahesh -accused.