ಮೈಸೂರಲ್ಲಿ ವಾಟರ್’ಪ್ರೂಫರ್ ಅಸೋಸಿಯೇಷನ್ ಆಫ್ ಇಂಡಿಯಾ (ಡಬ್ಲ್ಯೂಎಐ) ಸೌತ್’ನಿಂದ ತರಬೇತಿ ಕಾರ್ಯಾಗಾರ

Promotion

ಮೈಸೂರು, ಅಕ್ಟೋಬರ್ 19, 2023 (www.justkannada.in): ಮೈಸೂರಿನ ಜಲ ಮಹಲ್ ರೆಸಾರ್ಟ್’ನಲ್ಲಿ ಇತ್ತೀಚಿಗೆ ವಾಟರ್’ಪ್ರೂಫರ್ ಅಸೋಸಿಯೇಷನ್ ಆ‍ಫ್ ಇಂಡಿಯಾ (ಡಬ್ಲ್ಯೂಎಐ) ಸೌತ್’ನಿಂದ ಕಲಿಕಾ ಕಾರ್ಯಾಗಾರ ಆಯೋಜಿಸಲಾಗಿತ್ತು.

‘ಮ್ಯಾನೇಜ್’ಮೆಂಟ್ ಆಫ್ ವಾಟರ್ ಪ್ರೂಫಿಂಗ್ ಬಿಸಿನೆಸ್’ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಾಟರ್’ಪ್ರೂಫರ್ ಅಸೋಸಿಯೇಷನ್ ಆ‍ಫ್ ಇಂಡಿಯಾ ಸೌತ್’ ಸದಸ್ಯರಿಗೆ ವ್ಯಾಪಾರ ವಹಿವಾಟಿನ ನಿರ್ವಹಣೆ ಹಾಗೂ ಸೈಕೋಜಿಯೊಮೆಟ್ರಿಕ್ಸ್ ಕುರಿತು ಎರಡು ದಿನ ತರಬೇತಿ ನೀಡಲಾಯಿತು.

ಬಿಸಿನೆಸ್ ಕನ್ಸಲ್ಟೆಂಟ್ ಹಾಗೂ ಕಾರ್ಪೋರೇಟ್ ಟ್ರೈನರ್ ರಾಜೇಶ್ ಕೆ. ರಾವ್ ಅವರು, ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಬಗೆ, ನಿರ್ವಹಣೆ, ಸಾಮಾಜಿಕ ಜಾಲತಾಣಗಳ ಸಮರ್ಪಕ ಬಳಕೆ, ಗ್ರಾಹಕರನ್ನು ಸೆಳೆಯಲು ಜಾಹೀರಾತು ಬಳಕೆ ಸೇರಿದಂತೆ ನಾನಾ ವಿಷಯಗಳ ಕುರಿತು ಸಲಹೆ ಸೂಚನೆ ನೀಡಿದರು.

ತರಬೇತುದಾರರಾದ ಎ.ಜಿ.ವೇಣುಗೋಪಾಲ್ ಅವರು ವ್ಯವಹಾರ ನಿರ್ವಹಣೆ, ಗ್ರಾಹಕ ಮನಸ್ಥಿತಿ ಅರಿತು ವಹಿವಾಟು ನಡೆಸುವ ಬಗೆ, ಗ್ರಾಹಕರ ವರ್ತನೆಗೆ ತಕ್ಕಂತೆ ಚಾಕಚಕ್ಯತೆಯಿಂದ ವಹಿವಾಟು ನಡೆಸುವ ಸಲಹೆಗಳನ್ನು ನೀಡಿದರು.

ಎರಡು ದಿನ ನಡೆದ ಕಾರ್ಯಾಗಾರದಲ್ಲಿ ಕೇರಳಾ, ತಮಿಳುನಾಡು, ಮುಂಬೈ, ದೆಹಲಿ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆಯಿಂದ ವಾಟರ್’ಪ್ರೂಫರ್ ಅಸೋಸಿಯೇಷನ್ ಆ‍ಫ್ ಇಂಡಿಯಾದ ಸದಸ್ಯರು ಪಾಲ್ಗೊಂಡಿದ್ದರು.

ಡಬ್ಲ್ಯೂಐ ಸೌತ್ ಅಧ್ಯಕ್ಷ ವೈ.ಬಿ.ಗಣಪತಿ, ಡಬ್ಲ್ಯೂಎಐ ಹೆಡ್ ಆರ್.ಕೆ.ಸುನೀಲ್, ಡಬ್ಲ್ಯೂಎಐ ಸೌತ್ ಕಾರ್ಯದರ್ಶಿ ರಾಜೇಶ್, ಖಜಾಂಚಿ ಗೌರೆಡ್ಡಿ, ಕಾರ್ಯಾಗಾರ ಸಂಯೋಜಕ ಪ್ರಕಾಶ್, ಅಲ್ತಾಫ್, ಅಶ್ವಥ್’ನಾರಾಯಣ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.