ಒಡಿಶಾದಲ್ಲಿ ರೈಲು ದುರಂತ:  ಕಂಬನಿ ಮಿಡಿದ ಸ್ಪೀಕರ್ ಯು.ಟಿ.ಖಾದರ್

Promotion

ಬೆಂಗಳೂರು,ಜೂನ್,3,2023(www.justkannada.in):  ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಅಪಘಾತ ಸಂಭವಿಸಿ 230ಕ್ಕೂ ಹೆಚ್ಚು ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಕಂಬನಿ ಮಿಡಿದಿದ್ದಾರೆ.

ಒಡಿಶಾದಲ್ಲಿನ ರೈಲು ಅಪಘಾತ ಅತ್ಯಂತ ನೋವಿನ ಸಂಗತಿ. ಈ ಅಪಘಾತ ಎಲ್ಲಾ ಇಲಾಖೆಗಳ ಕಣ್ಣು ತೆರೆಸುವಂತೆ ಮಾಡಿದೆ. ರೈಲು ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮುಂದೆ ಈ ರೀತಿಯ ಅಪಘಾತ ಆಗದಂತೆ ತಡೆಯಬೇಕಿದೆ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.

Key words: Train accident -Odisha – very- painful-Speaker – UT Khader