ಸುಭಿಕ್ಷ ಕರ್ನಾಟಕವನ್ನ ಕಾಂಗ್ರೆಸ್ ಭಿಕ್ಷಾ ರಾಜ್ಯವನ್ನಾಗಿ ಮಾಡುತ್ತಿದೆ- ಗ್ಯಾರಂಟಿ ಕುರಿತು ಸಂಸದ ಪ್ರತಾಪ್ ಸಿಂಹ ಕಿಡಿ.

ಮೈಸೂರು,ಜೂನ್,3,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಜಾರಿ ಮಾಡುತ್ತಿರುವ ಐದು ಗ್ಯಾರಂಟಿಗಳ ಯೋಜನೆಯನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸುಭಿಕ್ಷ ಕರ್ನಾಟಕವನ್ನ ಕಾಂಗ್ರೆಸ್ ಭಿಕ್ಷಾ ರಾಜ್ಯವನ್ನಾಗಿ ಮಾಡುತ್ತಿದೆ.  ಚುನಾವಣೆ ಮೊದಲು ಕಾಂಗ್ರೆಸ್ ನವರು ಊರಿಗೆ ಹೋಗಿ ತಮಟೆ ಬಾರಿಸಿದ್ದರು. ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ  ಮಾಹಿತಿ ಕೊಟ್ಟಿಲ್ಲ.  ಪ್ರತಿಮನೆಗೆ  200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎನ್ನುತ್ತಿದ್ದರು. ಈಗ ಸರಾಸರಿ ಆಧರಿಸಿ ಉಚಿತ ವಿದ್ಯುತ್ ಎನ್ನುತ್ತಿದ್ದಾರೆ. ಯಾವುದೇ ಷರತ್ತು ಇಲ್ಲದೇ ಉಚಿತ ವಿದ್ಯುತ್ ಜಾರಿ ಮಾಡಿ ಎಂದು ಆಗ್ರಹಿಸಿದರು.

6 ಕೆ.ಜಿ ಅಕ್ಕಿಯನ್ನು ಕೇಂದ್ರ ಸರಕಾರ ಕೊಡುತ್ತಿದೆ. ಇದಕ್ಕೆ ನಾಲ್ಕು ಸೇರಿಸಿ 10 ಕೆಜಿ ಕೊಟ್ಟರೆ ಅದು ನಿಮ್ಮ ಗ್ಯಾರಂಟಿ ಹೇಗೆ ಆಗುತ್ತೆ? ಇದು ಮೋಸ ಅಲ್ವಾ? ಯುವ ನಿಧಿ ಹೆಸರಲ್ಲೂ ಸರಕಾರ ಜನರಿಗೆ ಮೋಸ ಮಾಡಲಾಗುತ್ತಿದೆ. ಮತಗಳ ಹಗಲು ದರೋಡೆ ಮಾಡಿ ಈಗ ಜನರಿಗೆ ಟೋಪಿ ಹಾಕುವ ಕೆಲಸ ಆಗುತ್ತಿದೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.

Key words: Subhiksha -Congress – turning -Karnataka – MP -Pratap Simha.