ವರ್ಷಕ್ಕೆ 4 ಸಾವಿರ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ: ಬೆಳಗಾವಿ ಕೆಜಿಟಿಟಿಐ ನಿರ್ಮಾಣಕ್ಕೆ ಶಂಕುಸ್ಥಾಪನೆ.

ಬೆಳಗಾವಿ,ಡಿಸೆಂಬರ್,28,2022(www.justkannada.in):  ವರ್ಷಕ್ಕೆ 4,000 ಯುವಜನರಿಗೆ ತರಬೇತಿ ನೀಡುವ ಉದ್ದೇಶದ ‘ಕರ್ನಾಟಕ ಜರ್ಮನ್ ಬಹುಕೌಶಲ್ಯ ತರಬೇತಿ ಕೇಂದ್ರ’ (ಕೆಜಿಟಿಟಿಐ) ಕಟ್ಟಡ‌ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿತು.

ಕೌಶಲಾಭಿವೃದ್ಧಿ ಸಚಿವ ಡಾ. ಸಿ ಎನ್ ಅಶ್ವತ್ ನಾರಾಯಣ್  ಅವರು ಶಂಕುಸ್ಥಾಪನೆ ನೆರವೇರಿಸಿ, 15.5 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಮಭಾಗದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಈ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಕೋರ್ಸ್ ಗಳಿಗೆ ಸಂಬಂಧಿಸಿದಂತೆ ತರಬೇತಿ ಕೊಡಲಾಗುವುದು. ಪ್ರವರ್ಧಮಾನಕ್ಕೆ ಬರುತ್ತಿರುವ ಎಲೆಕ್ಟ್ರಿಕ್ ವೆಹಿಕಲ್ಸ್, ವಾಹನ ತಾಂತ್ರಿಕತೆ ಎಂತಹ ಪ್ರಸ್ತುತಕ್ಕೆ ಸಲ್ಲುವ ಕೋರ್ಸ್ ಗಳನ್ನು ಇದು ಒಳಗೊಂಡಿದೆ ಎಂದು ಸಚಿವ ಅಶ್ವಥ್ ನಾರಾಯಣ್ ವಿವರಿಸಿದರು.

ತಯಾರಿಕಾ ಕ್ಷೇತ್ರವು ಇಂದು ಊಹೆಗೂ ನಿಲುಕುದಷ್ಟು ಮುಂದುವರೆದಿದೆ. ಅದಕ್ಕೆ ಅನುಗುಣವಾಗಿ ಈ ಕೇಂದ್ರದಲ್ಲಿ ಆತ್ಯಾಧುನಿಕ‌ ರೀತಿಯಲ್ಲಿ ತರಬೇತಿ ನೀಡಲಾಗುವುದು ಎಂದು ಸಚಿವರು ಹೇಳಿದರು.

ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಕರ್ನಾಟಕವು ಇಡೀ ಪ್ರಪಂಚದಲ್ಲೇ ಭರವಸೆಯ ತಾಣವಾಗಿದೆ. ಆದರೆ, ಇದರ ಲಾಭವು ನಮಗೆ ಸಿಗಬೇಕೆಂದರೆ ನಮ್ಮ ಯುವಕರು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇದನ್ನು ಗಮನದಲ್ಲಿರಿಸಿಕೊಂಡು ಇಂತಹ ಕೇಂದ್ರಗಳನ್ನು ಸರ್ಕಾರವು ಆದ್ಯತೆಯ ಮೇರೆಗೆ ಸ್ಥಾಪಿಸುತ್ತಿದೆ ಎಂದರು.

ನಮ್ಮ ದೇಶಕ್ಕೆ ಕೈಗಾರಿಕಾ ಕ್ರಾಂತಿ 1.0, 2.0  ಮತ್ತು 3.0ಯ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಈಗ ಕೈಗಾರಿಕಾ ಕ್ರಾಂತಿ 4.0ರ ಅವಕಾಶಗಳನ್ನು ನಾವು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ಒತ್ತಿ ಹೇಳಿದರು.

ಕರ್ನಾಟಕವು ಅವಕಾಶಗಳ ತಾಣವಾಗಿದೆ. ಮುಂಚೆ, ಮುಂಬೈ ದೇಶದ ಹಣಕಾಸು ರಾಜಧಾನಿಯಾಗಿತ್ತು. ಆದರೆ ಈಗ ಬೆಂಗಳೂರಿನಲ್ಲಿರುವ ಎರಡೇ ಎರಡು ಆನ್ಲೈನ್ ಕಂಪನಿ ಗಳು ದೇಶದ ಶೇಕಡ 50ರಷ್ಟು ಷೇರು ವಹಿವಾಟನ್ನು ನಿರ್ವಹಿಸುತ್ತಿವೆ. ಇನ್ನು ಐದು ವರ್ಷಗಳಲ್ಲಿ ರಾಜ್ಯದ ಫಿನ್ ಟೆಕ್ ಕಂಪನಿಗಳು ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದೇ ರೀತಿಯಾಗಿ, ಶಿಕ್ಷಣ ತಂತ್ರಜ್ಞಾನ ಮೆಡಿ ಟೆಕ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯವುಅಗ್ರಪಂಕ್ತಿಯಲ್ಲಿ ನಿಲ್ಲಲಿದೆ ಎಂದರು ವಿವರಿಸಿದರು.

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತಿತರರು ಇದ್ದರು. ಕೆಜಿಎಂಎಸ್ ಡಿಸಿ ಜಂಟಿ ಕಾರ್ಯದರ್ಶಿ ಬಿ.ಎಸ್ ರಘುಪತಿ ಸ್ವಾಗತಿಸಿದರು. ಕೆಜಿಟಿಟಿಐ ಬೆಳಗಾವಿ ನಿರ್ದೇಶಕ ಚಿದಾನಂದ ಬಾಕೆ ಇದ್ದರು.

Key words: train -4,000 youth- annually-Foundation stone –laid- KGTTI-minister-Ashwath narayan

ENGLISH SUMMARY…

Plans to train 4,000 youth annually

Foundation stone laid for KGTTI

Belagavi: Foundation stone was laid at Udyambagh here on Wednesday to build ‘Karnataka German Technical Training lnstitute’ (KGTTI) which has the intention to skill train 4,000 youth annually.

Speking on the occasion, Skill Development Minister, Dr CN Ashwath Narayan, who laid the foundation stone stated that the multi skill training centre would be built at a cost of Rs. 15.5 crores.

The centre would offer 30+ courses with the focus on imparting skills to youth in emerging technologies such as electronic vehicle sector, machine learning, robotics etc.

Saying that the manufacturing sector has advanced beyond imagination, he added that the centre would train the youth keeping in mind the global industry needs.

“The state of Karnataka has become a promising destination in terms of generation of employment. However, to make use of this opportunity our youth should acquire skills. Realising the importance of this the state government is giving priority to set up centres such as KGTTI,” Narayan remarked.

“India could not make use of the previous three industrious industrial revolutions. But, being a country with a popular of 144 crore people, currently, we cannot afford to miss the opportunities to be created by industrial revolution 4.0.”, he said.

Karnataka has become a land of opportunities. Earlier Mumbai was the financial capital of the country. But now only two companies based at Bengaluru are handling 50% of the stocks trade happening in the entire country, Narayan explained.

Fintech companies of the state would play a play crucial role in handling the financial services in the next 5 years. Similarly, the companies from the state would also become front runners in edu, meditech and such other domains, he opined.

Belagavi South MLA Abhaya Patila, Rajyasabha Member Eranna Kadadi and others were present.