ಅರಮನೆಯಲ್ಲಿ ಸಂಪ್ರದಾಯ ದಸರಾಕ್ಕೆ ಸಕಲ‌ ಸಿದ್ದತೆ: ಈ ಬಾರಿ ಖಾಸಗಿ ದರ್ಬಾರ್ ನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಪ್ರವೇಶ ಇಲ್ಲ…

ಮೈಸೂರು,ಅಕ್ಟೋಬರ್,13,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಕೊರೋನಾ ಕಾರ್ಮೋಡದ ನಡುವೆ ಮೈಸೂರು ಅರಮನೆಯಲ್ಲಿ ಸಂಪ್ರದಾಯ ದಸರಾಕ್ಕೆ ಸಕಲ‌ ಸಿದ್ದತೆ ನಡೆಸಲಾಗುತ್ತಿದೆ.jk-logo-justkannada-logo

ಅರಮನೆಯಲ್ಲಿ ಅತಿ ಕಡಿಮೆ ಸಿಬ್ಬಂದಿಗಳನ್ನು ಒಳಗೊಂಡಂತೆ ನವರಾತ್ರಿ ತಯಾರಿ ನಡೆಸಲಾಗುತ್ತಿದೆ. ರಾಜ್ಯದಲ್ಲಿ  ಕೊರೋನಾ ಮಹಾಮಾರಿ ಹೆಚ್ಚಾಗಿ ಹರುಡುತ್ತಿರುವ ಹಿನ್ನೆಲೆ ಈ ಬಾರಿ ಶರನವರಾತ್ರಿ ಉತ್ಸವದಲ್ಲಿ ವಿಜೃಂಭಣೆಗೆ ಬ್ರೇಕ್ ಹಾಕಲಾಗಿದ್ದು, ರಾಜವಂಶಸ್ಥರು ಅನೇಕ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಕೈ ಬಿಟ್ಟಿದ್ದಾರೆ.

ಶರವರಾತ್ರಿ ವೇಳೆ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾತ್ರ ಮಾಡಲು ಚಿಂತನೆ ನಡೆಸಿದ್ದು, ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ನಲ್ಲಿ ಈ ಬಾರಿ 60 ವರ್ಷ ಮೇಲ್ಪಟ್ಟವರಿಗೆ ಪ್ರವೇಶ ಇರುವುದಿಲ್ಲ ಈ ದರ್ಬಾರ್ ನಲ್ಲಿ ಹಸ್ತಾಲಂಘಾನ ನೀಡುವರು, ದರ್ಬಾರ್ ಭಕ್ಷಿ‌ಗೂ ಅವಕಾಶ ಇಲ್ಲ. ಅರೋಗ್ಯದ ದೃಷ್ಠಿಯಿಂದ ಈ ಭಾರಿ ರಾಜವಂಶಸ್ಥರು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ.traditional-dasara-palace-above-60-years-kasagi-darbar

ಜತೆಗೆ  ಖಾಸಗಿ ದರ್ಬಾರ್ ಗೆ ಈ ಬಾರಿ ವಿಶೇಷ ಅತಿಥಿಗಳಿಗೂ ಅಹ್ವಾನ ನೀಡದಿರಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆ ಆಯ್ದ ಅಹ್ವಾನಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಒಂಬತ್ತು ದಿನಗಳ ದಸರಾದಲ್ಲಿ ಭಾಗವಹಿಸುವರಿಗೆ ಕೊರಾನಾ ಟೆಸ್ಟ್ ಮಾಡಿಸಲು ಚಿಂತನೆ ನಡೆಸಿದ್ದು, ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸೂಚನೆ ನೀಡಿದ್ದಾರೆ.

Key words: Traditional Dasara – Palace- Above -60 years – kasagi darbar