ಸಂಧಾನ ಸಫಲ: ಸಮಾಜ ಕಲ್ಯಾಣ ಇಲಾಖೆ ಖಾತೆ ಒಪ್ಪಿಕೊಂಡ ಸಚಿವ ಶ್ರೀರಾಮುಲು…

ಬೆಂಗಳೂರು,ಅಕ್ಟೋಬರ್,13,2020(www.justkannada.in):  ಆರೋಗ್ಯ ಖಾತೆಯನ್ನು ಹಿಂಪಡೆದು ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿರುವುದಕ್ಕೆ ಸಚಿವ ಶ್ರೀರಾಮುಲು ಅಸಮಾಧಾನ ಗೊಂಡಿದ್ದಾರೆಂಬ ಸುದ್ದಿ ಹರಡಿತ್ತು. ಇದೀಗ ಈ ವಿಚಾರಕ್ಕೆ ತೆರೆ ಬಿದ್ದಿದೆ. ನಾನು ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನ ಒಪ್ಪಿದ್ದೇನೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಖಾತೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಮತ್ತು ಸಚಿವ ಡಾ.ಕೆ.ಸುಧಾಕರ್ ಅವರ ನಡುವೆ ಅಸಮಾಧಾನವಿದೆ ಎನ್ನಲಾಗುತ್ತು. ಈ ಹಿನ್ನೆಲೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಇಬ್ಬರು ಸಚಿವರನ್ನ ತಮ್ಮ ಕಾವೇರಿ ನಿವಾಸಕ್ಕೆ ಕರೆಸಿ ಸಂಧಾನ ನಡೆಸಿದ್ದು ಸಂಧಾನ ಸಫಲವಾಗಿದೆ.

ಸಿಎಂ ಬಿಎಸ್ ವೈ ಭೇಟಿ ಬಳಿಕ ಮಾತನಾಡಿರುವ ಸಚಿವ ಶ್ರೀರಾಮುಲು, ಖಾತೆ ಬದಲಾವಣೆಯಲ್ಲಿ ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ನನಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಸಂತೋಷದಿಂದ ಒಪ್ಪಿಕೊಂಡು ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.minister-sriramulu-k-sudhakar-meet-cm-bs-yeddyurappa

ಮುಖ್ಯಮಂತ್ರಿಗಳು ಒಳ್ಳೆಯ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದಾಗ ಸಮಾಜಕಲ್ಯಾಣ ಇಲಾಖೆಯನ್ನೇ ವಹಿಸಿ ಎಂದಿದ್ದೆ. ಆದರೆ ಬೇರೆ ಬೇರೆ ಕಾರಣಗಳಿಂದ ಆರೋಗ್ಯ ಇಲಾಖೆ ನೀಡಿದ್ದರು. ಜತೆಗೆ ಸುಧಾಕರ್ ಅವರು ವ್ಯದ್ಯರಾಗಿರುವುದರಿಂದ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ಜೊತೆಗೆ ಆರೋಗ್ಯ ಖಾತೆಯನ್ನು ಹೆಚ್ಚುವರಿಯಾಗಿ ನೀಡಿದ್ದಾರೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

Key words: Minister Sriramulu-k.Sudhakar- meet- cm –BS yeddyurappa