ಮೈಸೂರಿನ ಪ್ರವಾಸಿತಾಣಗಳಲ್ಲಿ ಕಠಿಣ ನಿರ್ಬಂಧ ಸದ್ಯಕ್ಕಿಲ್ಲ- ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ.

Promotion

ಮೈಸೂರು,ಜನವರಿ,21,2022(www.justkannada.in):  ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ಕಠಿಣ ನಿಯಮಗಳನ್ನ ಜಾರಿ ಮಾಡಲಾಗಿದ್ದು ಈ ಮಧ್ಯೆ  ಮೈಸೂರಿನ ಪ್ರವಾಸಿತಾಣಗಳಲ್ಲಿ ಕಠಿಣ ನಿರ್ಬಂಧ ಸದ್ಯಕ್ಕಿಲ್ಲ. ಪರಿಸ್ಥಿತಿಯ ಆಧರಾದ ಮೇಲೆ ಕೆಲವು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪ್ರವಾಸಿತಾಣಗಳನ್ನು ಬಂದ್ ಮಾಡುವಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ. ಕಠಿಣ ನಿರ್ಬಂಧಗಳ ಅವಶ್ಯಕತೆಯೂ ಸದ್ಯಕ್ಕೆ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಶಾಲೆಗಳ ಬಂದ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ಆಯಾ ಶಾಲೆಗಳ ಪರಿಸ್ಥಿತಿಗನುಣವಾಗಿ ಡಿಡಿಪಿಐ ನಿರ್ಧಾರ ಮಾಡುತ್ತಾರೆ. ಸ್ಥಳೀಯ ಶಾಸಕರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಾಮೂಹಿಕವಾಗಿ ಶಾಲೆಗಳ ಬಂದ್ ಮಾಡುವ ಪ್ರಸ್ತಾಪ ಇಲ್ಲ ಎಂದರು.

Key words: Tourist places – Mysore -not –restricted-Minister -ST Somashekhar