ಬಂಡೀಪುರ ಅರಣ್ಯ ರಸ್ತೆಯಲ್ಲಿ ಪಲ್ಟಿಯಾದ ಪ್ರವಾಸಿ  ಬಸ್: ಹಲವರಿಗೆ ಗಾಯ.

Promotion

ಚಾಮರಾಜನಗರ, ಅಕ್ಟೋಬರ್,25,2023(www.justkannada.in): ಚಾಲಕನ ನಿಯಂತ್ರಣ ತಪ್ಪಿ ಪಶ್ಚಿಮ ಬಂಗಾಳದ ಪ್ರವಾಸಿ ಬಸ್ ಉರುಳಿಬಿದ್ದ ಘಟನೆ ಬಂಡೀಪುರ ಅರಣ್ಯ ರಸ್ತೆಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಮೇಲುಕಾಮನಹಳ್ಳಿ ಬಂಡೀಪುರ ಅರಣ್ಯ ರಸ್ತೆಯ ಬಳಿ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಊಟಿಯಿಂದ ಮೈಸೂರು ಕಡೆಗೆ ಬರುತ್ತಿದ್ದ ಬಸ್, ಮೇಲುಕಾಮನಹಳ್ಳಿ ಬಳಿ ಕಾಡಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪಾರು ಪ್ರಾಣಾಪಾಯರಾಗಿದ್ದಾರೆ. ಇನ್ನು ಗಾಯಾಳುಗಳಿಗೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಲಾಗುತ್ತಿದೆ.

ಪಶ್ಚಿಮ ಬಂಗಾಳದ ಪ್ರವಾಸಿ ಬಸ್ ಊಟಿ ನೋಡಿಕೊಂಡು ಬರುತ್ತಿರುವಾಗ ಮೇಲುಕಾಮನಹಳ್ಳಿ ಬಂಡೀಪುರ ಅರಣ್ಯ ರಸ್ತೆಯಲ್ಲಿ ಉರುಳಿ ಬಿದ್ದಿದೆ.ದುರ್ಘಟನೆಯಲ್ಲಿ 24 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Tourist bus- overturns – Bandipur –forest- road