ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ: ಅವರ ಮಾತಿಗೆ ತಲೆಕೆಡಿಸಿಕೊಳ್ಳಲ್ಲ-ಡಿಸಿಎಂ ಡಿಕೆ ಶಿವಕುಮಾರ್ ಕಿಡಿ.

ಬೆಂಗಳೂರು,ಅಕ್ಟೋಬರ್,25,2023(www.justkannada.in):  ಕನಕಪುರವನ್ನ ಬೆಂಗಳೂರಿಗೆ ಸೇರಿಸುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಇದು ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶ ಎಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಹೆಚ್.ಡಿ ಕುಮಾರಸ್ವಮಿ ಮಾತಿಗೆ ತಲೆ ಕೆಡಿಸಿಕೊಳ್ಳಲ್ಲ.  ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ. ಸಿಎಂ ಆಗಿದ್ದವರಿಗೆ ಕಾಮನ್ ಸೆನ್ಸ್ ಇರಬೇಕು. ಹೆಚ್.ಡಿ ಕುಮಾರಸ್ವಾಮಿ ಅವರ ತಂದೆಯನ್ನ ಕೇಳಿ ತಿಳಿದುಕೊಳ್ಳಲಿ.  ನಾವು ಬೆಂಗಳೂರಿನವರು ರಾಮನಗರದವರಲ್ಲ ಎಂದು ಟಾಂಗ್ ನೀಡಿದರು.

ಆಡಳಿತಕ್ಕಾಗಿ ಕೆಲವು ಭಾಗ ಮಾಡಿದ್ದಾರೆ. ರಾಮನಗರನೂ ನಮ್ದೆ ಬಿಡದಿ, ಚನ್ನಪಟ್ಟಣವೂ ನಮ್ಮದೇ ಎಂದು ಡಿ.ಕೆ ಶಿವಕುಮಾರ್ ಗುಡುಗಿದರು.

Key words: kanakapur-bangalore- Kumaraswamy – no -common sense-DCM-DK Shivakumar.