ಸಿದ್ದರಾಮಯ್ಯ ಪಡೆದುಕೊಂಡ ಕಮಿಷನ್ ಒಟ್ಟು ಮೊತ್ತವೇ ಚಾಮುಂಡೇಶ್ವರಿ ಕ್ಷೇತ್ರದ ಸೋಲು- ಸಚಿವ ಕೆ.ಎಸ್ ಈಶ್ವರಪ್ಪ ತಿರಗೇಟು.

ಮೈಸೂರು,ನವೆಂಬರ್,20,2021(www.justkannada.in):  ಪರ್ಸಂಟೇಜ್ ಸರ್ಕಾರವನ್ನ  ವಜಾಗೊಳಿಸುವಂತೆ ರಾಜ್ಯಪಾಲರಿಗೆ ದೂರು ನೀಡುವೆ ಎಂದು ಹೇಳಿಕೆ ನೀಡಿದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಅವರೇ ಕಮೀಷನ್ ಕಿಂಗ್. ಸಿದ್ದರಾಮಯ್ಯ ಪಡೆದುಕೊಂಡ ಕಮಿಷನ್ ಒಟ್ಟು ಮೊತ್ತವೇ ಚಾಮುಂಡೇಶ್ವರಿ ಕ್ಷೇತ್ರದ ಸೋಲು. ಸಿಎಂ ಆದಿಯಾಗಿ ಸೋಲಿಸಿ ಪಕ್ಷವೇ ಅಧಿಕಾರ ಕಳೆದುಕೊಂಡಿತು. ನಮ್ಮ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲೂ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿಲ್ಲ. ಯಾವುದೇ ಅಧಿಕಾರಿ ಅಥವಾ ಚುನಾಯಿತ ಪ್ರತಿನಿಧಿ ಕಮಿಷನ್ ಪಡೆದಿಲ್ಲ. ಅಂತಹ ಯಾವುದೇ ಆರೋಪ ಇದ್ದರೂ ಖುದ್ದು ದೂರು ಕೊಡಲಿ. ತಕ್ಷಣ ಅವರ‌ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾವು ಶುದ್ದವಾಗಿದ್ದೇವೆ, ಗುತ್ತಿಗೆದಾರರ ದೂರು ಗಂಭೀರವಾಗಿ ಪರಿಗಣಿಸುವಂತಿಲ್ಲ ಎಂದು ಹೇಳಿದರು.

ಸಚಿವ ಎಸ್.ಟಿ‌.ಸೋಮಶೇಖರ್ ಆಪ್ತ ದಿನೇಶ್ ಗೂಳಿಗೌಡ ಕಾಂಗ್ರೆಸ್‌ಗೆ ಜಿಗಿತದ ಹಿಂದೆ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಎಂಬ ಕೈವಾಡ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಸ್.ಟಿ ಸೋಮಶೇಖರ್ ಅವರೇ ಬಹಿರಂಗ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಚುನಾವಣೆಗೆ ನಿಲ್ಲು ಅಂತ ಎಸ್.ಎಂ‌‌‌.ಕೃಷ್ಣ ಹೇಳಿದ್ದಾರೆ ಅಂದ. ನನಗೆ ವಿಷಯ ಗೊತ್ತಾಗುತ್ತಿದ್ದಂತೆ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಿಂದ ತೆಗೆದು ಹಾಕಿದ್ದೇನೆ. ಈ ವಿಚಾರವನ್ನು ಜೆ.ಪಿ.ನಡ್ಡಾ ಸೇರಿದಂತೆ ವರಿಷ್ಠರಿಗೂ ತಿಳಿಸಿದ್ದೇನೆ. ನನ್ನ ಜತೆಯಲ್ಲಿ ಇದ್ದುಕೊಂಡೇ ಪಕ್ಷಾಂತರ ಮಾಡಿರೋದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಸೇರೋದು, ರಾಜಕೀಯ ಮಾಡೋದು ಅವರ ವೈಯಕ್ತಿಕ ವಿಚಾರ‌. ಎಂದು ಎಸ್.ಟಿ ಸೋಮಶೇಖರ್ ನುಡಿದರು.

Key words: total -loss – commission – Siddaramaiah – defeat – Chamundeshwari –constituency-Minister- KS Eshwarappa.