ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಟಾಂಗ್ : ಸಿಎಂ ಬಿಎಸ್ ವೈ ನಮ್ಮ  ಪ್ರಶ್ನಾತೀತ ನಾಯಕ ಎಂದ್ರು ಸಚಿವ ವಿ.ಸೋಮಣ್ಣ…

Promotion

ಬೆಂಗಳೂರು,ಮೇ,30,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ಸಿಎಂ ಅಷ್ಟೇ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ವಸತಿ ಸಚಿವ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ.

ಯತ್ನಾಳ್ ಅವರು ಹಿರಿಯರು, ಕೇಂದ್ರದಲ್ಲಿ ಮಂತ್ರಿಯಾಗಿದ್ದವರುಯತ್ನಾಳ್ ಯಡಿಯೂರಪ್ಪ ಅವರ ಜೊತೆ ಚರ್ಚಿಸಲಿ. ಅವರು ಸಾಮರಸ್ಯ ಬೆಳೆಸ್ಕೋಬೇಕು ಎಂದು ಸಚಿವ ವಿ,ಸೋಮಣ್ಣ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಲಹೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಸಾರ್ವಜನಿಕವಾಗಿ ಯತ್ನಾಳ್ ಹೇಳಿಕೆಗಳನ್ನು ಕೊಡಬಾರದು. ಯತ್ನಾಳ್ ನೇರ ನುಡಿಗೆ ಹೆಸರಾದವರು. ಅನುಸರಿಸಿಕೊಂಡು ಹೋಗುವಂತೆ ನಾನೂ ಸಹ ಯತ್ನಾಳ್ ರಿಗೆ ಹೇಳ್ತೇನೆ ಎಂದು ತಿಳಿಸಿದರು.

ಸಿಎಂ ಬಿ.ಎಸ್ ಯಡಿಯೂರಪ್ಪ ನಮ್ಮ  ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಹೇಳಿದಂತೆ ನಾವೆಲ್ಲ ಕೇಳಬೇಕಾಗುತ್ತದೆ. ಯಡಿಯೂರಪ್ಪ ಒಂದು ಸಮುದಾಯದ ನಾಯಕರಲ್ಲ. ಅವರು ಇಡೀ ರಾಜ್ಯದ, ಎಲ್ಲ ಸಮುದಾಯಗಳ ನಾಯಕ ಎಂದು ಬಂಡಾಯ ಶಾಸಕರಿಗೆ ಸಚಿವ ವಿ.ಸೋಮಣ್ಣ ಕಿವಿಮಾತು ಹೇಳಿದರು.

ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಯಾವುದೇ ಅಸಮಧಾನ ಇಲ್ಲ. ಯಡಿಯೂರಪ್ಪ ಕೋವಿಡ್ ನಿಯಂತ್ರಣ ಉತ್ತಮವಾಗಿ ಮಾಡ್ತಿದ್ದಾರೆ. ಬಿಎಸ್ ವೈ ರಾಜ್ಯದ ಜಾತ್ಯಾತೀತ ನಾಯಕ ಪಕ್ಷದಲ್ಲಿ ಕೆಲವರಿಗೆ ಅಸಮಾಧಾ ಇದ್ದರೇ ಅದನ್ನ ಬಿಎಸ್ ವೈ ಸರಿಪಡಿಸುತ್ತಾರೆ. ನಾವೆಲ್ಲ ಯಡಿಯೂರಪ್ಪ ಜೊತೆ ಇರ್ತೀವಿ. ನಾಲ್ಕು ಗೋಡೆ ಮಧ್ಯೆ ಏನೇನಾಗಬೇಕೋ ಅದು ಆಗುತ್ತೆ. ಯಡಿಯೂರಪ್ಪ ಅನುಭವಿಯಾಗಿದ್ದು, ಅಸಮಾಧಾನ ಸರಿಪಡಿಸ್ತಾರೆ ಎಂದು ಸಿಎಂ ಬಿಎಸ್ ವೈ ಪರ ಸಚಿವ ವಿ.ಸೋಮಣ್ಣ ಬ್ಯಾಟ್ ಬೀಸಿದರು.

ಮೈಸೂರು ಜಿಲ್ಲಾ ಉಸ್ತುವಾರಿಯಿಂದ ಕೊಕ್  ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಯಡಿಯೂರಪ್ಪ ನಮ್ಮ ನಾಯಕ. ಯಡಿಯೂರಪ್ಪ ನಿರ್ಧಾರಕ್ಕೆ ನಾನು‌ ಬದ್ಧ. ಕೆಲವೊಮ್ಮೆ ಈಥರದ್ದೆಲ್ಲ ಆಗ್ತಿರುತ್ತವೆ ಎಂದರು.

ಕಾರ್ಪೋರೇಟರ್ ಇಮ್ರಾನ್ ಪಾಷ ವಿರುದ್ಧ ಸಚಿವ ಸೋಮಣ್ಣ ಕಿಡಿ

ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಕೊರೋನಾ ಸೋಂಕು ಹಿನ್ನೆಲೆ,ಇಮ್ರಾನ್ ಪಾಷಾ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ವಿ.ಸೋಮಣ್ಣ,   ಕಾರ್ಪೊರೇಟರ್ ಆದ್ರೇನು ಬೇರೆ ಆದ್ರೇನು? ಎಲ್ರೂ ಕಾನೂನಿಗೆ ಬೆಲೆ ಕೊಡಬೇಕು. ಎಲ್ಲರೂ ಕಾನೂನು ಪಾಲಿಸ್ಬೇಕು. ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂಟೈನ್ ಆಗಿದ್ರು. ಕಾರ್ಪೊರೆಡಟರ್ ಯಾವ್ ಲೆಕ್ಕ ಹೇಳಿ…? ಕೋತಿ ತಾನು ಕೆಡ್ತು ಅಂತ ಹೊಲವೆಲ್ಲ ಕೆಡಿಸೋಕೆ ಹೊಗಬಾರದು. ಇನ್ರಾನ್ ಪಾಷಾಗೆ ಇನ್ನೂ ಸಣ್ ವಯಸ್ಸು. ಕಾನೂನಿಗೆ ಇಮ್ರಾನ್ ಪಾಷ ಬೆಲೆ ಕೊಡಲಿ ಎಂದು ಹೇಳಿದರು.

Key words: Tong – MLA- Basanagouda Patil Yatnal-CM BS yeddyurappa-Minister-V. Somanna.