ಕರೋನಾ ಸಂಕಷ್ಟದಲ್ಲಿ BREAKING NEWS ಆಯ್ತು ‘ ಪಬ್ಲಿಕ್ ಟಿವಿ’ ಸಂಪಾದಕರ ಈ ನಡೆ…!

0
2601

 

ಬೆಂಗಳೂರು, ಮೇ 30, 2020 : (www.justkannada.in news) : ಕರೋನ ಕಾರಣ ಕಳೆದ ಕೆಲ ದಿನಗಳಿಂದ ಮಾಧ್ಯಮ ಕ್ಷೇತ್ರ ಸೇರಿದಂತೆ ಈಗ ಖಾಸಗಿ ವಲಯದಲ್ಲಿ ಎಲ್ಲೆಡೆ ವೇತನ ಕಡಿತ, ಉದ್ಯೋಗ ಕಡಿತದ್ದೆ ಸದ್ದು.

ಅದರಲ್ಲೂ ಮಾಧ್ಯಮ ಕ್ಷೇತ್ರದಲ್ಲಿ ಕಳೆದ ಕೆಲ ದಿನಗಳಿಂದ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಸಂಬಳ ತಡವಾಗುತ್ತಿದೆ ಎಂಬುದೇ ‘ ಬ್ರೇಕಿಂಗ್ ನ್ಯೂಸ್ ‘ . ಆದರೆ ಇದಕ್ಕೆ ಭಿನ್ನವಾಗಿ ನಿಂತಿದೆ ‘ ಪಬ್ಲಿಕ್ ಟಿವಿ’ ಕಾರಣ, ಸಿಬ್ಬಂದಿಗೆ ಸಂಬಳದ ಜೊತೆ ಈ ಬಾರಿ ಬೋನಸ್ ಕೊಟ್ಟಿರುವುದು.

ಒಂದು ಪತ್ರಿಕಾ ಸಂಸ್ಥೆ ಯಲ್ಲಿ ( ಅಥವಾ ಯಾವುದೇ ಸಂಸ್ಥೆ) ಆರ್ಥಿಕ ಶಿಸ್ತು ಇದ್ದರೆ, ಆ ಸಂಸ್ಥೆಯ ಮಾಲೀಕನಿಗೆ ತನ್ನ ಸಂಸ್ಥೆಯ ನೌಕರರು ಬರೀ ನೌಕರರು ಎನ್ನಿಸಿಕೊಳ್ಳದೆ ಕುಟುಂಬಸ್ಥರು ಎನ್ನಿಸಿ ಕೊಂಡಾಗ ಮಾತ್ರ ಇಂಥಹದು ಸಾಧ್ಯ ಎಂದು ಪಬ್ಲಿಕ್ ಟಿವಿಯ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದೆ.

kannada-media-public.tv-Bangalore-journalist-h.r.ranganath-bonus-for-journalists

ಕೋವಿಡ್ ಕಾರಣದಿಂದ ಎಲ್ಲಾ ಸಂಸ್ಥೆಗಳಲ್ಲೂ ಕಳೆದ ಎರಡು ತಿಂಗಳಿಂದ ಆದಾಯ ದೊಡ್ಡ ಮಟ್ಟದಲ್ಲಿ ಕುಸಿದಿದೆ. ನಿರೀಕ್ಷಿತ ಆದಾಯ ಬರುವುದಕ್ಕೆ ಇನ್ನೂ ಕೆಲ ತಿಂಗಳು ಬೇಕಾಗಿದೆ‌‌‌. ಇದೇ ನೆಪ ಮಾಡಿಕೊಂಡು ಸಂಬಳ ಕಟ್ ಮಾಡುವುದು, ಸಂಬಳ ನೀಡದೆ ಇರುವುದು, ನೌಕರರ ಕೆಲಸದಿಂದ ತೆಗೆಯೋದು ಸಂಸ್ಥೆಯ ಮಾಲೀಕನಿಗೆ ಬಹು ಸುಲಭದ ಕೆಲಸ!. ಆದರೆ, ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್.‌ ರಂಗನಾಥ್, ತಮ್ಮ ಸಹೋದ್ಯೋಗಿಗಳು ನಿರೀಕ್ಷೆಯೂ ಮಾಡಿರದ ವೇಳೆಯಲ್ಲಿ ಬೋನಸ್ ಕೊಡುವ ಮೂಲಕ ಸಿಬ್ಬಂದಿ ವರ್ಗದಲ್ಲಿ ಆಶ್ಚರ್ಯದ ಜತೆಗೆ ಸಂತಸ ಮೂಡಿಸಿದ್ದಾರೆ.

ಎಚ್.ಆರ್.‌ರಂಗನಾಥ್ ಬರೀ ಪಬ್ಲಿಕ್ ಟಿವಿಯ ಮುಖ್ಯಸ್ಥರಾದರೂ ಮೂಲತಃ ಅವರು ಪತ್ರಕರ್ತರು ! ಹಾಗಾಗಿ ಪತ್ರಕರ್ತರ ಕಷ್ಟ ಹೇಗಿರುತ್ತದೆ ಎಂಬುದನ್ನು ಸ್ವತಃ ಅನುಭವಿಸಿದವರು. ಹೀಗಾಗಿಯೇ ಕೊರೋನಾ ಸಮಯದಲ್ಲೂ ಹಗಲಿರುಳು ಕೆಲಸ ಮಾಡಿದ ಸಹೋದ್ಯೋಗಿಗಳಿಗೆ ಬೋನಸ್ ಕೊಟ್ಟಿದ್ದಾರೆ.

kannada-media-public.tv-Bangalore-journalist-h.r.ranganath-bonus-for-journalists

ಪಬ್ಲಿಕ್ ಟಿವಿ ಶುರುವಾದ ವರ್ಷದಿಂದ ಪ್ರತಿ ವರ್ಷವೂ ಸಹೋದ್ಯೋಗಿಗಳ ಸಂಬಳ ಅವರ ಕಾರ್ಯ ಕ್ಷಮತೆ ಮೇಲೆ ಹೆಚ್ಚಿಸಲಾಗಿದೆ. ಒತ್ತಡದ ಕೆಲಸವಿದ್ದಾಗಾಲೂ ಬೋನಸ್ ನೀಡಿದ ಉದಾಹರಣೆ ಇದೆ. ಆದರೆ, ಈಗ ಆದಾಯವೇ ಇಲ್ಲದ ವೇಳೆಯೂ ಹೆಚ್ಚಿನ ಒತ್ತಡದಲ್ಲಿ ಸಹೋದ್ಯೋಗಿಗಳು ಕೆಲಸ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ನಿರೀಕ್ಷಿತ ಆದಾಯದ ಕೊರತೆ ನಡುವೆಯೂ ಬೋನಸ್ ನೀಡುವ ಮೂಲಕ ಭಿನ್ನ ಎನಿಸಿಕೊಂಡಿದ್ದಾರೆ ಕ್ಯಾಪ್ಟನ್ ರಂಗಣ್ಣ.

 

key words : kannada-media-public.tv-Bangalore-journalist-h.r.ranganath-bonus-for-journalists