ನಾಳೆ ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಎಐಸಿಸಿ ನಾಯಕತ್ವ ನಿರ್ಧಾರ ಸಾಧ್ಯತೆ

Promotion

ನವದೆಹಲಿ, ಆಗಸ್ಟ್ 23, 2020 (www.justkannada.in): ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (ಸಿಡಬ್ಲ್ಯೂಸಿ) ನಾಳೆ ನಡೆಯಲಿದೆ.

ರಾಹುಲ್‍ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದು, ಈ ಸಂಬಂಧ 20 ಹಿರಿಯ ನಾಯಕರು ಪಕ್ಷದ ಅನಾಯಕಿ ಸೋನಿಯಾಗಾಂ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಸಂಸದರು, ಕೇಂದ್ರದ ಮಾಜಿ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 20 ಮುಖಂಡರು ಸೋನಿಯಾ ಅವರಿಗೆ ಪತ್ರ ಬರೆದು ಪಕ್ಷದ ಹಿತದೃಷ್ಟಿಯಿಂದ ಮತ್ತು ಕಾಂಗ್ರೆಸ್ ಸಂಘಟನೆಗಾಗಿ ರಾಹುಲ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಸೋನಿಯಾ ಅವರ ನಾಯಕತ್ವದಲ್ಲೇ ನಿಷ್ಠೆ ವ್ಯಕ್ತಪಡಿಸಿರುವ ಮತ್ತೊಂದು ಬಣ ಯುಪಿಎ ಅಧ್ಯಕ್ಷರೇ ಕಾಂಗ್ರೆಸ್ ನಾಯಕಿಯಾಗಿ ಮುಂದುವರಿಯಬೇಕು ಎಂದು ಒತ್ತಾಯಿಸಿದೆ.