ನಾಳೆ ಆರ್.ಆರ್ ನಗರ ಉಪಚುನಾವಣಾ ಮತ ಎಣಿಕೆ: ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್..

ಬೆಂಗಳೂರು,ನವೆಂಬರ್,9,2020(www.justkannada.in): ನವೆಂಬರ್ 3 ರಂದು ನಡೆದ ಆರ್.ಆರ್ ನಗರ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು ನಾಳೆ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.kannada-journalist-media-fourth-estate-under-loss

ನಾಳಿನ ಮತ ಎಣಿಕೆಗೆ ಸಿದ್ಧತೆ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.  ನಾಳೆ ಬೆಳಿಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂ ತೆಗೆಯಲಾಗುತ್ತದೆ. ಬೆಳಿಗ್ಗೆ 8ರಿಂದ ಮತದಾನ ಎಣಿಕೆ ಪ್ರಾರಂಭವಾಗಲಿದೆ. 8 ರಿಂದ 8.30ರವರೆಗೆ ಅಂಚೆಮತ ಎಣಿಕೆ ನಡೆಯಲಿದೆ. 8.30ರ ನಂತರ ಇತರೇ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.Tomorrow- RR nagar- by-election -vote count-BBMP Commissioner -Manjunath Prasad

4 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು 28 ಕೌಂಟಿಂಗ್ ಟೇಬಲ್ ಗಳನ್ನ ವ್ಯವಸ್ಥೆ ಮಾಡಲಾಗಿದೆ. ಒಂದು ಟೇಬಲ್ ಗೆ ಮೂವರು ಸಿಬ್ಬಂದಿ ನಿಯೋಜಿಸಲಾಗುತ್ತದೆ.  ಮತ ಎಣಿಕೆಗೆ 250 ಸಿಬ್ಬಂದಿಯನ್ನ  ನಿಯೋಜಿಸಲಾಗಿದ್ದು ಬೆಳಿಗ್ಗೆ 7 ಗಂಟೆಗೆ ಅಯಾ ಪಕ್ಷದ ಏಜೆಂಟ್ ಗಳು ಬರಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

Key words: Tomorrow- RR nagar- by-election -vote count-BBMP Commissioner -Manjunath Prasad